ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿ:ಸಿನಿಮೀಯ ರೀತಿಯಲ್ಲಿ ಜಿಗಿದು ಪ್ರಾಣ ಉಳಿಸಿಕೊಂಡ ಚಾಲಕ, ಕ್ಲಿನರ್

kadaba times

ಕೆಂಪು ಕಲ್ಲು ಗಳನ್ನು ಹೇರಿಕೊಂಡು ಹೋಗುತ್ತಿರುವ ಲಾರಿಯೊಂದು ಪಲ್ಟಿ ಯಾಗಿ ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಕೇರಳ -ಕರ್ನಾಟಕದ ಗಡಿಭಾಗದ ಸುಳ್ಯ ಪದವಿನ ದೇವಸ್ಯ ಎಂಬಲ್ಲಿ  ಶುಕ್ರವಾರ ಸಂಜೆ ನಡೆದಿದೆ.

kadaba times
uniq

ಮಿಂಚಿ ಪದವು ಪ್ರದೇಶದ ಕಲ್ಲಿನ ಕೋರೆಯಿಂದ ಕರ್ನಾಟಕ ಪ್ರದೇಶಕ್ಕೆ  ಕೆಂಪು ಕಲ್ಲು  ಹೇರಿ ಕೊಂಡು ಬಂದ ಲಾರಿ ದೇವಸ್ಯ ಸೇತುವೆ ಬಳಿ  ವೇಗವಾಗಿ ಬರುತ್ತಿದ್ದಾಗ  ಕಾರೊಂದಕ್ಕೆ ಸೈಡ್ ಕೊಡುವ ವೇಳೆ ರಸ್ತೆ ಬದಿಯ ತೋಟ ಕ್ಕೆ ಉರುಳಿ ಬಿದ್ದು ಪಲ್ಟಿ ಯಾಗಿದೆ.

ಲಾರಿ ಮಗುಚಿ ಬೀಳುವ ಮುನ್ನ ಸಿನಿಮೀಯ ರೀತಿಯಲ್ಲಿ ಲಾರಿ ಚಾಲಕ, ಕ್ಲಿನರ್ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.  ಕಾರಿನಲ್ಲಿ ಮಕ್ಕಳು ಸೇದಂತೆ ಆರು ಮಂದಿ ಪ್ರಯಾಣಿಸುತ್ತಿದ್ದರು ರಸ್ತೆ ಇಕ್ಕೆಲುಗಳು ಅಪಾಯಕಾರಿ ಇರುವುದರಿಂದ  ಈ ಅಪಘಾತವಾಗಿದೆ  ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

kadaba times
kadaba times

ಸೇತುವೆ ಬಳಿ ಅಪಾಯಕಾರಿ ರಸ್ತೆ:  ಕೇರಳ ಕರ್ನಾಟಕ ಗಡಿ ಪ್ರದೇಶ ದ ದೇವಸ್ಯ ಸೇತುವೆ ಕುಸಿತ ಕಂಡಿದ್ದು ಇದು  ಕಿರಿದಾಗಿದೆ. ಇದರ ಎರಡು ಬದಿಯಲ್ಲಿದ್ದ  ತಡೆ ಬೇಲಿ ಮುರಿದು ಹೋಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಇದರ ಒಂದು ಬದಿ ಕೇರಳ ಪಿಡಬ್ಲ್ಯೂಡಿ ರಸ್ತೆ ಅಭಿವೃದ್ಧಿ ಗೊಳಿಸ , ರಸ್ತೆ ಅಗಲೀಕರಣ ಗೊಳಿಸಿದೆ. ಆದರೆ ಕರ್ನಾಟಕ ಭಾಗದ ಕಾಂಕ್ರೀಟ್ ರಸ್ತೆ ಕಿರಿದಾಗಿದ್ದು ಸೈಡು ಕೊಡುವ ವಿಚಾರದಲ್ಲಿ ಆಗಾಗ ಪ್ರತಿ ನಿತ್ಯ ಸಣ್ಣಪುಟ್ಟ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ.  ಕಾಂಕ್ರೇಟ್ ರಸ್ತೆ ಇಕ್ಕೆಲಗಳು ಅಪಾಯಕಾರಿಯಾಗಿದ್ದು ಅನಾಹುತ ಗಳಿಗೆ ಕಾರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಮುಂದೆ ಆಗುವ ಅನಾಹುತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Related Articles

Latest Articles