ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ; ಕನ್ನಡಾಭಿಮಾನ ಬದುಕಿನುದ್ದಕ್ಕೂ ಇರಲಿ-ಕಡಬ ತಹಶೀಲ್ದಾರ್

kadaba times

ಕಡಬ ತಾಲೂಕು ಆಡಳಿತದ ವತಿಯಿಂದ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನඩාಭಿಮಾನ ಕೇವಲ ರಾಜ್ಯೋತ್ಸವದ ದಿನಕ್ಕೆ ಸೀಮಿತವಾಗದೆ ಬದುಕಿನುದ್ದಕ್ಕೂ ಇರಬೇಕು ಎಂದು ಕಡಬ ತಹಶೀಲ್ದಾರ್ ಗಣೇಶ್ ಸವಣೂರು ಕರೆ ನೀಡಿದರು. ಸಮಾರಂಭದಲ್ಲಿ ಕನ್ನಡಾಂಬೆಯ ಆಕರ್ಷಕ ಮೆರವಣಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

kadaba times

ಕಡಬ: ಕಡಬ ತಾಲೂಕು ಆಡಳಿತ ಸೌಧದ ಮುಂಭಾಗ ಹಾಗೂ ಸೈಂಟ್ ಜೋಕಿಮ್ ಚರ್ಚ್ ಸಭಾಂಗಣದಲ್ಲಿ ತಾಲೂಕು ಮಟ್ಟದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ಸಡಗರ-ಸಂಭ್ರಮದಿಂದ ನಡೆಯಿತು.

ತಾಲೂಕು ಆಡಳಿತ ಸೌಧದ ಮುಂಭಾಗ ಧ್ವಜವಂದನೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಬ ತಹಶೀಲ್ದಾರ್ ಗಣೇಶ್ ಸವಣೂರು ಅವರು, “ಕನ್ನಡಾಭಿಮಾನ ಎನ್ನುವುದು ಕೇವಲ ರಾಜ್ಯೋತ್ಸವದ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು. ಪ್ರತಿಯೊಬ್ಬ ಕನ್ನಡಿಗನೂ ಬದುಕಿನುದ್ದಕ್ಕೂ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಮತ್ತು ಅಭಿಮಾನವನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಬೆಳವಣಿಗೆಗೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ಕವಿಪುಂಗವರು ಬೆಳೆಸಿ ಶ್ರೀಮಂತಗೊಳಿಸಿದ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು” ಎಂದು ಹೇಳಿದರು.

ಜ್ಞಾನಪೀಠ ಪ್ರಶಸ್ತಿಗಳೇ ಕನ್ನಡದ ಶ್ರೀಮಂತಿಕೆಗೆ ಸಾಕ್ಷಿ – ತಮನ್ನಾ ಜಬೀನ್:

kadaba times

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ತಮನ್ನಾ ಜಬೀನ್ ಮಾತನಾಡಿ, “ಕನ್ನಡಿಗರ ಸ್ವಾಭಿಮಾನ ಮತ್ತು ನೆಲದ ಅಸ್ಮಿತೆಯ ಸಂಕೇತವಾಗಿ ನಾವು ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಮಣ್ಣಿನ ಸುವಾಸನೆ, ಭಾಷೆಯ ಆಳ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಗೆ ಕನ್ನಡಕ್ಕೆ ಲಭಿಸಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳೇ ಜ್ವಲಂತ ಸಾಕ್ಷಿ. ಇಂತಹ ಸಮೃದ್ಧ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಎಲ್ಲರೂ ನಿರಂತರ ಪ್ರಯತ್ನಿಸಬೇಕು” ಎಂದರು.

uniq

ಕನ್ನಡದ ಕುರಿತು ವಿಶೇಷ ಉಪನ್ಯಾಸ ನೀಡಿದ ಕುಂತೂರು ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಮುಖ್ಯಗುರು ಹರಿಶ್ಚಂದ್ರ ಕೋಡ್ತ, ಕನ್ನಡ ನಾಡು ವೈವಿಧ್ಯಮಯ ಸಂಸ್ಕೃತಿಯ ಸಾಮರಸ್ಯದ ಶಾಂತಿಯ ತೋಟವಾಗಿದೆ. ಕನ್ನಡ ಸಾಹಿತ್ಯ ಹಾಗೂ ವೈಜ್ಞಾನಿಕ ಭಾಷೆಯಾಗಿ ಕನ್ನಡಕ್ಕಿರುವ ಸೌಂದರ್ಯ ಅಪಾರ. ಅನ್ಯ ಭಾಷೆಯ ಕಲಿಕೆಗೆ ವಿರೋಧವಿಲ್ಲ, ಆದರೆ ಕನ್ನඩාಭಿಮಾನ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಕೆ.ಎಂ. ಹನೀಫ್ ಕಡಬ ಮಾತನಾಡಿದರು.

ಸಾಧಕರಿಗೆ ಗೌರವ ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಹಾಗೂ ಭತ್ತದ ತಳಿ ಉಳಿಸುವ ಕಾಯಕದಲ್ಲಿ ತೊಡಗಿರುವ ರಾಜ್ದೀಪಕ್ ಜೈನ್ ಮತ್ತು ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕ ಬಾಲಕೃಷ್ಣ ಕೋಡಿಂಬಾಳ ಅವರನ್ನು ತಾಲೂಕು ಆಡಳಿತದ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ನೀಡಿ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.

ಕನ್ನಡಾಂಬೆಯ ಆಕರ್ಷಕ ಮೆರವಣಿಗೆ – ಸಾಂಸ್ಕೃತಿಕ ವೈಭವ: ಸಭಾ ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಆಡಳಿತ ಸೌಧದ ಮುಂಭಾಗ ಕನ್ನಡ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಯನ್ನೊಳಗೊಂಡ ಬ್ಯಾಂಡ್ ವಾದ್ಯಗಳ ಭವ್ಯ ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ಕಡಬ ಸೈಂಟ್ ಜೋಕಿಮ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಪ್ರಕಾಶ್ ಪೌಲ್ ಡಿಸೋಜ, ಪ.ಪಂ. ಸದಸ್ಯರಾದ ದಯಾನಂದ ಗೌಡ ಪಿಜಕ್ಕಳ, ಫೈಝುಲ್, ರೋಹಿತ್ ಪಣೆಮಜಲು, ಅಕ್ಷತಾ ಬಾಲಕೃಷ್ಣ, ಕಡಬ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಡಿ. ದೇವರಾಜು, ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಡಾ. ವೇದಾವತಿ, ಜಿ.ಪಂ. ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ತಾ.ಪಂ. ವ್ಯವಸ್ಥಾಪಕ ನಾರಾಯಣ ಗೌಡ, ಉಪ ತಹಶೀಲ್ದಾರ್ ಶಾಯಿದುಲ್ಲಾ ಖಾನ್, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಉಪಸ್ಥಿತರಿದ್ದರು.

Related Articles

Latest Articles