ಕಡಬ ಪಟ್ಟಣ ಪಂಚಾಯತ್ ಕಚೇರಿಗೆ 112 ಪೊಲೀಸರ ಎಂಟ್ರಿ

kadaba times

ಕಡಬ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೊಬ್ಬ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಆಗಸ್ಟ್ 10ರ ಬೆಳಿಗ್ಗೆ 112 ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸದರಿ ನೌಕರನನ್ನು ಕೆಲಸದಿಂದ ವಜಾಗೊಳಿಸಿ ಗುತ್ತಿಗೆದಾರರು ಪಟ್ಟಣ ಪಂಚಾಯತ್‌ಗೆ ಇ-ಮೇಲ್ ರವಾನಿಸಿದ್ದಾರೆ.

kadaba times
uniq

ಕಡಬ: ಇಲ್ಲಿನ ಕಡಬ ಪಟ್ಟಣ ಪಂಚಾಯತ್ ಕಚೇರಿಗೆ ಆಗಸ್ಟ್ 10ರ ಬೆಳಿಗ್ಗೆ 112 ತುರ್ತು ಸ್ಪಂದನ ಪಡೆಯ ಪೊಲೀಸರು ಆಗಮಿಸಿದ ಘಟನೆ ನಡೆದಿದ್ದು, ಕಚೇರಿಯ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಘಟನೆಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೊಬ್ಬ ಶನಿವಾರ ಕಚೇರಿಯ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಇತರ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.  ನೌಕರನ ಈ ನಡೆಯಿಂದಾಗಿ ಕಚೇರಿಯ ವಾತಾವರಣದಲ್ಲಿ ಸಿಬ್ಬಂದಿಗಳಿಗೆ ಕಿರಿಕಿರಿಯುಂಟಾಗಿ, ಕರ್ತವ್ಯಕ್ಕೆ ಅಡಚಣೆ ಎದುರಾಗಿತ್ತು ಎಂದು ಹೇಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಕಚೇರಿ ತೆರೆಯುವುದು ಕೊಂಚ ತಡವಾಗಿದ್ದು, ನಂತರದ ಬೆಳವಣಿಗೆಯಲ್ಲಿ ಕಚೇರಿಗೆ 112 ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದಾರೆ.

kadaba times
kadaba times

ಸ್ಥಳಕ್ಕೆ ಆಗಮಿಸಿದ ಪೊಲೀಸರು – ನೌಕರನ ವಜಾ?

ಸ್ಥಳಕ್ಕೆ ಆಗಮಿಸಿದ 112 ಸಿಬ್ಬಂದಿಗಳು ಕಚೇರಿಯ ವಾತಾವರಣ ಪರಿಶೀಲಿಸಿ, ಕಚೇರಿಯ ದೈನಂದಿನ ಕಾರ್ಯಕಲಾಪಗಳಿಗೆ ಹಾಗೂ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಅಡಚಣೆ ಅಥವಾ ತೊಂದರೆ ನೀಡದಂತೆ ನೌಕರನಿಗೆ ತಿಳುವಳಿಕೆ ನೀಡಿ ಹಿಂತಿರುಗಿದ್ದಾರೆ. ಈ ನಡುವೆ, ಕಚೇರಿಯಲ್ಲಿ  ನೌಕರನ ವರ್ತನೆ ಹಾಗೂ ಸಿಬ್ಬಂದಿಗಳ ದೂರಿನ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಗುತ್ತಿಗೆದಾರರು (Agency Contractor) ತಕ್ಷಣವೇ ಕಾರ್ಯಪ್ರವೃತ್ತರಾಗಿ  ಹೊರಗುತ್ತಿಗೆ ನೌಕರನನ್ನು ಸೇವೆಯಿಂದ ವಜಾಗೊಳಿಸಿ, ಆ ಕುರಿತು ಕಡಬ ಪಟ್ಟಣ ಪಂಚಾಯತ್‌ಗೆ ಅಧಿಕೃತ ಇ-ಮೇಲ್ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Latest Articles