ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ವರುಣಾರ್ಭಟ: ಮೊದಲ ಬಾರಿಗೆ ಬಾಳುಗೋಡು ಸೇತುವೆ ಮುಳುಗಡೆ

kadaba times

ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ತಪ್ಪಲು ಪ್ರದೇಶವಾದ ಸುಳ್ಯ ತಾಲೂಕಿನಾದ್ಯಂತ ಶುಕ್ರವಾರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದ್ದು, ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ.

kadaba times
uniq

ಸುಬ್ರಹ್ಮಣ್ಯ, ಬಾಳುಗೋಡು, ಹರಿಹರ, ಬಲ್ಪ, ಗುತ್ತಿಗಾರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಹೊಳೆಗಳು, ತೋಡುಗಳು  ಭರ್ತಿಯಾಗಿ ಹರಿಯುತ್ತಿವೆ.

ಮಧ್ಯಾಹ್ನದ ನಂತರ ಧರೆಗಿಳಿದ ಮಳೆಯು ಸುದೀರ್ಘ ಗಂಟೆಗಳ ಕಾಲ ಸುರಿದ ಕಾರಣ ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹಠಾತ್ತನೆ ಏರಿಕೆಯಾಗಿದೆ. ಪ್ರಮುಖವಾಗಿ ಬಾಳುಗೋಡಿನಲ್ಲಿ ಈ ವರ್ಷದ ಮಳೆಗಾಲದ ಋತುವಿನಲ್ಲಿ ಮೊದಲ ಬಾರಿಗೆ ಗ್ರಾಮೀಣ ಸಂಪರ್ಕ ಸೇತುವೆಯೊಂದು ಹಳ್ಳದ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

kadaba times
kadaba times

ಅಲ್ಲದೆ, ರಸ್ತೆಗಳ ಮೇಲೆಯೇ ಮಳೆ ನೀರು ರಭಸವಾಗಿ ಹರಿದಿದ್ದರಿಂದ ವಾಹನ ಸಂಚಾರಕ್ಕೂ ಕೆಲಕಾಲ ಅಡಚಣೆ ಉಂಟಾಯಿತು.ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ತೀವ್ರವಾಗಿ ಕ್ಷೀಣಿಸಿದ್ದರಿಂದ ನದಿ, ಹಳ್ಳ ಹಾಗೂ ಬಾವಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ಆದರೆ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಬತ್ತುತ್ತಿದ್ದ ತೋಡುಗಳಿಗೆ ಮತ್ತೆ ಜೀವ ತುಂಬಿದಂತಾಗಿದೆ.

Related Articles

Latest Articles