ನಿವೃತ್ತ ಅಬಕಾರಿ ಅಧಿಕಾರಿ ಆಂಗಾರ ಹಾರಾಡಿ ಇನ್ನಿಲ್ಲ

kadaba times

ನಿವೃತ್ತ ಅಬಕಾರಿ ಇಲಾಖೆ ಅಧಿಕಾರಿ ಹಾಗೂ ಈ ಹಿಂದೆ ಪುತ್ತೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರಾಗಿದ್ದ ಆಂಗಾರ ಹಾರಾಡಿ ಅವರು ಜುಲೈ 24ರಂದು ನಿಧನರಾಗಿದ್ದಾರೆ. ಕೊಡುಗೈ ದಾನಿ ಹಾಗೂ ಸ್ನೇಹಮಯಿ ವ್ಯಕ್ತಿತ್ವ ಹೊಂದಿದ್ದ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಮೊಗೇರ ಸಂಘ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

kadaba times
uniq

ಪುತ್ತೂರು: ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿಯೂ, ಪುತ್ತೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರೂ ಆಗಿದ್ದ  ಆಂಗಾರ ಹಾರಾಡಿ ಅವರು ಜುಲೈ 24, 2026ರ ಶುಕ್ರವಾರದಂದು ನಿಧನರಾಗಿದ್ದಾರೆ.

ಅಂಗಾರ ಹಾರಾಡಿ ಅವರು ಅಬಕಾರಿ ಇಲಾಖೆಯಲ್ಲಿ ದೀರ್ಘಕಾಲ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಪುತ್ತೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದರು.

 ಬನ್ನೂರು ನವೋದಯ ಯುವಕ ವೃಂದದ ಮಾಜಿ ಅಧ್ಯಕ್ಷರೂ, ಹಾಲಿ ಗೌರವಾಧ್ಯಕ್ಷರೂ ಆಗಿದ್ದ ಅಂಗಾರ ಪಿ ಅವರು ಕಾಂಗ್ರೆಸ್ ಪಡೀಲ್‌ಬೂತ್‌ನ ಅಧ್ಯಕ್ಷರಾಗಿಯೂ, ಪಡೀಲು ಸಾರ್ವಜನಿಕ ಕಟ್ಟೆಪೂಜೆ ಸಮಿತಿಯಲ್ಲೂ ಸಕ್ರಿಯರಾಗಿದ್ದರು. ಪುತ್ತೂರು ಪೇಟೆಯ ಹೃದಯಭಾಗ ಚಿಕ್ಕಪುತ್ತೂರಿನಲ್ಲಿ ಭತ್ತಬೇಸಾಯ ಮಾಡುವ ಮೂಲಕ ಮಾದರಿ ಕೃಷಿಕರಾಗಿದ್ದರು. ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಜು.24ರ ನಸುಕಿನ ಜಾವ ಮೃತಪಟ್ಟಿದ್ದಾರೆ. ಮೃತರು ಜೀವ ವಿಮಾ ನಿಗಮದ ನಿವೃತ್ತ ಸಿಬ್ಬಂದಿ ಪತ್ನಿ ಸುಂದರಿ, ಪುತ್ರ, ಪುತ್ರಿ, ಸಹೋದರ ನಿವೃತ್ತ ಎಸ್.ಐ ಐತ್ತಪ್ಪ ಅವರನ್ನು ಅಗಲಿದ್ದಾರೆ

kadaba times
kadaba times

ಸ್ನೇಹಮಯಿ, ಕೊಡುಗೈ ದಾನಿ:

ತಮ್ಮ ಉದಾರ ಮನೋಭಾವ ಹಾಗೂ ಕೊಡುಗೈ ದಾನ ಗುಣದಿಂದ ಅಪಾರ ಬಂಧು-ಮಿತ್ರರನ್ನು ಸಂಪಾದಿಸಿದ್ದ ಆಂಗಾರ ಹಾರಾಡಿ ಅವರು, ಸರಳ ಹಾಗೂ ಸ್ನೇಹಮಯಿ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ಸಮಾಜದ ಬಡ-ಬಲಹೀನರಿಗೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಹಿರಿಯ ನಾಯಕನ ಅಗಲುವಿಕೆ ಮೊಗೇರ ಸಮುದಾಯದಲ್ಲಿ ಶೋಕವನ್ನುಂಟು ಮಾಡಿದೆ.

ರಾಜ್ಯ ಮೊಗೇರ ಸಂಘದಿಂದ ಕಂಬನಿ:

ಆಂಗಾರ ಹಾರಾಡಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಮೊಗೇರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಕೊಡುಗೈ ದಾನಿಯಾಗಿ, ಸ್ನೇಹಮಯಿ ವ್ಯಕ್ತಿತ್ವ ಹೊಂದಿದ್ದ ಹಿರಿಯ ನಾಯಕರ ಅಗಲುವಿಕೆ ನಮಗೆಲ್ಲರಿಗೂ ತೀವ್ರ ನೋವುಂಟು ಮಾಡಿದೆ. ಈ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಮತ್ತು ಸರ್ವ ಬಂಧುಗಳಿಗೆ ಒದಗಿಸಲಿ. ನಮ್ಮನ್ನು ಅಗಲಿರುವ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಬಂಧುಗಳು  ಸಂತಾಪ ಸೂಚಿಸಿದ್ದಾರೆ.

Related Articles

Latest Articles