ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣ: ಆರೋಪಿಗೆ ಕಡಬ ಸಂಚಾರಿ ಕೋರ್ಟಿನಿಂದ ಜಾಮೀನು

kadaba times

ಕಡಬ/ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿಗೆ ಕಡಬ ಸಂಚಾರಿ ನ್ಯಾಯಾಲಯವು (ಇಟಿನರೇಟ್ ಕೋರ್ಟ್) ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

kadaba times
uniq

ಜೂನ್ 26 ರಂದು ಸಂಜೆ  ಅಪ್ರಾಪ್ತ ಬಾಲಕಿಯೊಬ್ಬಳು ದಿಢೀರನೆ ನಾಪತ್ತೆಯಾಗಿದ್ದಳು. ಈ ಕುರಿತು ಬಾಲಕಿಯ ತಾಯಿ  ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿರುವ ಬಗ್ಗೆ ಲಿಖಿತ ದೂರು ನೀಡಿದ್ದರು. ತಾಯಿಯ ದೂರಿನ ಮೇರೆಗೆ ತಕ್ಷಣವೇ ತನಿಖೆ ಆರಂಭಿಸಿದ ಸುಬ್ರಹ್ಮಣ್ಯ ಪೊಲೀಸರು ತೀವ್ರ ಹುಡುಕಾಟ ನಡೆಸಿದಾಗ, ನಾಪತ್ತೆಯಾಗಿದ್ದ ಬಾಲಕಿಯು ಪುತ್ತೂರಿನ ‘ ಲಾಡ್ಜ್’ನಲ್ಲಿ ಪತ್ತೆಯಾಗಿದ್ದಾಳೆ.

ಆರೋಪಿಯ ಬಂಧನ ಮತ್ತು ಕೋರ್ಟ್‌ಗೆ ಹಾಜರು:

ಬಾಲಕಿಯನ್ನು ಅಪಹರಿಸಿರುವ ಆರೋಪದಡಿಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಜೂನ್ 29 ರಂದು ಆರೋಪಿಯನ್ನು ಬಂಧಿಸಿದ್ದರು. ಆತನ ವಿರುದ್ಧ ಅಪರಾಧ ಸಂಖ್ಯೆ: 24/2026 ರಂತೆ ಪ್ರಕರಣ ದಾಖಲಿಸಿಕೊಂಡು ಪ್ರಥಮ ಮಾಹಿತಿ ವರದಿ (FIR) ಸಿದ್ಧಪಡಿಸಲಾಗಿತ್ತು. ತದನಂತರ ಬಂಧಿತ ಆರೋಪಿಯನ್ನು ಜೂನ್ 30 ರಂದು ಸಂಜೆ ಕಡಬದ ಸಂಚಾರಿ ನ್ಯಾಯಾಲಯಕ್ಕೆ (Prl. Civil Judge & JMFC, Puttur, Itinerate Court at Kadaba) ಹಾಜರುಪಡಿಸಲಾಯಿತು.

kadaba times
kadaba times

ಈ ಸಂದರ್ಭದಲ್ಲಿ ಆರೋಪಿಯ ಪರವಾಗಿ  ವಕೀಲರುಗಳಾದ ಲೋಕೇಶ್ ಎಂ.ಜೆ., ಕಕ್ಕೆಕೃಷ್ಣಪ್ಪ ಗೌಡ ಹಾಗೂ ಕವನ ಬಿ. ಅವರು ನ್ಯಾಯಾಲಯದಲ್ಲಿ ಹಾಜರಾಗಿ ವಾದ  ಮಂಡಿಸಿದರು. ಆರೋಪಿಯ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮಾನ್ಯ ನ್ಯಾಯಾಲಯವು, ವಕೀಲರ ವಾದವನ್ನು ಪುರಸ್ಕರಿಸಿ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Related Articles

Latest Articles