ಪ್ರವೀಣ್ ನೆಟ್ಟಾರು ಕೊಲೆ ಕೇಸ್‌ನಲ್ಲಿ ಮತ್ತೊಬ್ಬ ಆರೋಪಿಗೆ ಬೇಲ್

kadaba times

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

kadaba times
uniq

ಪ್ರಕರಣದ 18ನೇ ಆರೋಪಿಯಾಗಿರುವ ಝಾಕೀರ್ ಸವಣೂರು (35) ಎಂಬಾತನೇ ಇದೀಗ ಜಾಮೀನು ಪಡೆದ ಆರೋಪಿ. ಪ್ರವೀಣ್ ನೆಟ್ಟಾರು ಹತ್ಯೆಯ ಸಂಚಿನಲ್ಲಿ ಈತ ನೇರವಾಗಿ ಭಾಗಿಯಾಗಿದ್ದ ಎಂಬ ಆರೋಪ ಎದುರಿಸುತ್ತಿದ್ದಾನೆ.

ಆರಂಭದಲ್ಲೇ ಬಂಧಿಸಲ್ಪಟ್ಟಿದ್ದ ಪ್ರಮುಖ ಆರೋಪಿ

ಪ್ರವೀಣ್ ನೆಟ್ಟಾರು ಕೊಲೆಯಾದ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿ ಆರಂಭದಲ್ಲೇ ಇಬ್ಬರು ಪ್ರಮುಖ ಶಂಕಿತರನ್ನು ವಶಕ್ಕೆ ಪಡೆದಿದ್ದರು. ಅದರಲ್ಲಿ ಝಾಕೀರ್ ಸವಣೂರು ಕೂಡ ಒಬ್ಬನಾಗಿದ್ದ. 2022ರ ಜುಲೈ 28 ರಂದು ಬೆಳ್ಳಾರೆಯ ಶಫೀಕ್ ಎಂಬಾತನೊಂದಿಗೆ ಈತನನ್ನು ಪೊಲೀಸರು ಬಂಧಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಈತನಿಗೆ ಇದೀಗ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

kadaba times
kadaba times

ಇನ್ನು ಇತ್ತೀಚೆಗಷ್ಟೇ ಈ ಪ್ರಕರಣದ 26ನೇ ಆರೋಪಿಯಾಗಿದ್ದ ಸೋಮವಾರಪೇಟೆಯ ಎಚ್.ವೈ. ರಿಯಾಜ್ ಎಂಬಾತನಿಗೂ ಜಾಮೀನು ಲಭಿಸಿತ್ತು. ಹತ್ಯೆಯ ಬಳಿಕ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಆರೋಪ ಈತನ ಮೇಲಿತ್ತು.

ಘಟನೆಯ ಹಿನ್ನೆಲೆ: 2022ರ ಜುಲೈ 26 ರಂದು ರಾತ್ರಿ ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿ ತಾನು ನಡೆಸುತ್ತಿದ್ದ ‘ಅಕ್ಷಯ ಚಿಕನ್ ಸೆಂಟರ್’ ಮುಚ್ಚಿ ಮನೆಗೆ ಹೊರಡಲು ಸಿದ್ಧರಾಗುತ್ತಿದ್ದ ಪ್ರವೀಣ್ ನೆಟ್ಟಾರು ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದರು.

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಈ ಹತ್ಯೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಲಾಗಿತ್ತು. ಎನ್‌ಐಎ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 26 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಪ್ರಕರಣದ ಹಳೆಯ ಆರೋಪಿಗಳಲ್ಲಿ ಒಬ್ಬನಾದ ಝಾಕೀರ್ ಸವಣೂರಿಗೆ ನ್ಯಾಯಾಲಯ ಬೇಲ್ ನೀಡಿದೆ.

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles