
ಕಡಬ: ಸ್ಥಳೀಯ ಸಾರ್ವಜನಿಕರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಡಬದ ಕಳಾರದಲ್ಲಿರುವ ಪ್ರಮುಖ ಆರೋಗ್ಯ ಕೇಂದ್ರವಾದ ‘ಕಡಬ ಮೆಡಿಕಲ್ ಸೆಂಟರ್’ನಲ್ಲಿ ಇದೇ ಬರುವ ಜೂನ್ 14ರ ಆದಿತ್ಯವಾರದಂದು ವಿಶೇಷ ವೈದ್ಯರ ಸಮಾಲೋಚನಾ ಶಿಬಿರವನ್ನು ಆಯೋಜಿಸಲಾಗಿದೆ.


ಅಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಾಡಿನ ಪ್ರಖ್ಯಾತ ಇಬ್ಬರು ತಜ್ಞ ವೈದ್ಯರು ಸಾರ್ವಜನಿಕರ ತಪಾಸಣೆ ಹಾಗೂ ಸಮಾಲೋಚನೆಗೆ ಲಭ್ಯವಿರಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲಿರುವ ತಜ್ಞ ವೈದ್ಯರು:
-
ಡಾ. ರಾಧಿಕಾ ಡಿ. (MBBS, MD Radio diagnosis): ಇವರು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ತಜ್ಞ ವೈದ್ಯರಾಗಿದ್ದು, ಸ್ಕ್ಯಾನಿಂಗ್ ವರದಿಗಳ ವಿಶ್ಲೇಷಣೆ ಮತ್ತು ತಪಾಸಣೆಯನ್ನು ನಡೆಸಲಿದ್ದಾರೆ.


-
ಡಾ. ಅಜಯ್ ಎಂ. ಬಿ. (MBBS, MS Orthopaedics): ಇವರು ಖ್ಯಾತ ಗಂಟು, ಮೂಳೆ ಹಾಗೂ ಎಲುಬು ತಜ್ಞ ವೈದ್ಯರಾಗಿದ್ದು, ಕೀಲು ನೋವು, ಬೆನ್ನು ನೋವು, ಮೂಳೆ ಸವೆತ ಹಾಗೂ ಎಲುಬಿಗೆ ಸಂಬಂಧಿಸಿದ ವಿವಿಧ ದೀರ್ಘಕಾಲಿಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ.
ಕಡಬ ತಾಲೂಕು ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾರ್ವಜನಿಕರು ದೂರದ ನಗರಗಳಿಗೆ ಅಲೆಯುವುದನ್ನು ತಪ್ಪಿಸಲು ಈ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮೆಡಿಕಲ್ ಸೆಂಟರ್ ಪ್ರಕಟಣೆ ಕೋರಿದೆ.
ಮುಂಗಡ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 7899555300 📞 8971820789
