ಕಡಬ: ಬ್ಯಾಂಕಿನಿಂದ ನೋಟಿಸ್ ಬಂದಿದ್ದಕ್ಕೆ ಮನನೊಂದ ವ್ಯಕ್ತಿ ನೇಣಿಗೆ ಶರಣು

kadaba times

ಕಡಬ: ಮನೆ ನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ, ಬ್ಯಾಂಕಿನಿಂದ ನೋಟಿಸ್ ಬಂದಿದ್ದಕ್ಕೆ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಸಂಭವಿಸಿದೆ.

kadaba times
uniq

ಚಾರ್ವಾಕ ಗ್ರಾಮದ ನಿವಾಸಿ ನೀಲಯ್ಯ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ನೀಲಯ್ಯ ಅವರು ಕೆಲವು ಸಮಯದ ಹಿಂದೆ ಹೊಸ ಮನೆ ನಿರ್ಮಾಣ ಮಾಡುವ ಸಲುವಾಗಿ ಬ್ಯಾಂಕಿನಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ನೀಲಯ್ಯ ಅವರಿಗೆ ನೋಟಿಸ್ ಜಾರಿಯಾಗಿತ್ತು.

ಬ್ಯಾಂಕ್ ನೋಟಿಸ್ ಬಂದಾಗಿನಿಂದ ತೀವ್ರ ಬೇಸರ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ನೀಲಯ್ಯ ಅವರು, ವಿಪರೀತ ಮದ್ಯಪಾನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಇದೇ ಮಾನಸಿಕ ಖಿನ್ನತೆಯಲ್ಲಿ ಜೂನ್ 08ರ ಸೋಮವಾರ ರಾತ್ರಿ ಮನೆಯ ರೂಮಿನಲ್ಲಿ ಯಾರೂ ಇಲ್ಲದ ವೇಳೆ ನೀಲಯ್ಯ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

kadaba times
kadaba times

ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಬಾಲಕ್ಕಿ (38) ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಯು ಡಿ ಆರ್‌ (UDR) ಸಂಖ್ಯೆ 21/2026, ಕಲಂ: 194 BNSS-2023 ರನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಮನಿಸಿ (ಹೆಲ್ಪ್‌ಲೈನ್): ಆರ್ಥಿಕ ಸಂಕಷ್ಟ ಅಥವಾ ಮಾನಸಿಕ ಒತ್ತಡಗಳಿದ್ದಲ್ಲಿ ಆತ್ಮಹತ್ಯೆ ನಿರ್ಧಾರ ಎಂದಿಗೂ ಪರಿಹಾರವಲ್ಲ. ಸೂಕ್ತ ಆಪ್ತಸಮಾಲೋಚನೆಗಾಗಿ ಸರ್ಕಾರದ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ 14416 ಅಥವಾ 104 ಸಂಖ್ಯೆಯನ್ನು ಸಂಪರ್ಕಿಸಿ ನೆರವು ಪಡೆಯಬಹುದು.

Related Articles

Latest Articles