ಪತ್ನಿ ಮನೆಯಿಂದ ಕೆಲಸಕ್ಕೆ ಹೋದ ಕಾಣಿಯೂರಿನ ವ್ಯಕ್ತಿ ನಾಪತ್ತೆ

kadaba times

ಕಡಬ/ಕಾಣಿಯೂರು:  ವಿದ್ಯುತ್ ಸರಬರಾಜು ಮಾಡುವ ತಂತಿ ಎಳೆಯುವ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಕಾಣಿಯೂರು ಗ್ರಾಮದ ಪುಣ್ಚತ್ತಾರು ನಿವಾಸಿಯೊಬ್ಬರು ಪತ್ನಿ ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

kadaba times
uniq

ಕಾಣಿಯೂರು ಗ್ರಾಮದ ಪುಣ್ಚತ್ತಾರು ನಿವಾಸಿಯಾಗಿರುವ ವಿನಯ್ (43) ನಾಪತ್ತೆಯಾದವರಾಗಿದ್ದಾರೆ. ಇವರು ಮಂಗಳೂರಿನಲ್ಲಿ ‘ಆದಿತ್ಯ ಟ್ರೇಡಿಂಗ್ ಸೊಲ್ಯೂಷನ್’ ಸಂಸ್ಥೆಯಲ್ಲಿ  ಟ್ರೇಡಿಂಗ್ ಕೆಲಸ ಮಾಡಿಕೊಂಡಿರುವುದರ ಜೊತೆಗೆ, ಪಾರ್ಟ್ ಟೈಮ್ ನೆಲೆಯಲ್ಲಿ ‘ಎಸ್.ಎಲ್.ವಿ’ ಕಂಪೆನಿಯ ‘ನಂಜುಂಡಿ ಟ್ರೇಡರ್ಸ್‌’ನಲ್ಲಿ ಕಾಂಟ್ರಾಕ್ಟ್ ವಹಿಸಿಕೊಂಡಿರುವ ವಿದ್ಯುತ್ ಸರಬರಾಜು ಮಾಡುವ ತಂತಿ ಎಳೆಯುವ ಕಾಮಗಾರಿಯ ಮೇಲುಸ್ತುವಾರಿ (ಸೂಪರ್‌ವೈಸರ್) ಕೆಲಸವನ್ನೂ ಮಾಡುತ್ತಿದ್ದರು.

ವಿನಯ್ ಅವರು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿರುವ ತಮ್ಮ ಪತ್ನಿಯ ಮನೆಯಲ್ಲಿದ್ದರು. ಮೇ 10ರಂದು ಎಂದಿನಂತೆ ಕೆಲಸಕ್ಕೆಂದು ಪತ್ನಿ ಮನೆಯಿಂದ ಹೊರಟವರು ಆ ಬಳಿಕ ಮನೆಗೆ ಮರಳಿ ಬಂದಿಲ್ಲ. ಅಷ್ಟೇ ಅಲ್ಲದೆ ಅವರ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ.

kadaba times
kadaba times

ನಾಪತ್ತೆಯಾಗಿರುವ ವಿನಯ್ ಅವರ ಕುರಿತು ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಎಲ್ಲ ಕಡೆಗಳಲ್ಲೂ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಅವರ ಪತ್ನಿ ಭವ್ಯ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Latest Articles