ತಡೆಗೋಡೆ ನಿರ್ಮಾಣಕ್ಕೆ ಅಳತೆ ಮಾಡುವಾಗ ಧರೆ ಕುಸಿತ; ಮಣ್ಣಿನಡಿ ಸಿಲುಕಿ ಗುತ್ತಿಗೆದಾರ ದುರ್ಮರಣ

kadaba times

ಮಂಗಳೂರು, ಮೇ 23: ನಗರದ ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ತಡೆಗೋಡೆ ನಿರ್ಮಾಣದ ಅಳತೆ ಕಾರ್ಯದಲ್ಲಿ ತೊಡಗಿದ್ದಾಗ ಏಕಾಏಕಿ ಧರೆ ಕುಸಿದು, ಮಣ್ಣಿನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಗುತ್ತಿಗೆದಾರರೊಬ್ಬರು ಮೃತಪಟ್ಟ ಭೀಕರ ಘಟನೆ ಗುರುವಾರ ನಡೆದಿದೆ.

kadaba times
uniq

ಉರ್ವ ಅಶೋಕನಗರ ನಿವಾಸಿ ಆ್ಯಂಟನಿ ಮಸ್ಕರೇನ್ಹಸ್ (65) ಮೃತಪಟ್ಟ ದುರ್ದೈವಿ.

ಲೋಹಿತ್ ನಗರದಲ್ಲಿ ಗುಡ್ಡ ಜರಿತ ಉಂಟಾದ ಜಾಗದ ಮೇಲ್ಭಾಗದಲ್ಲಿ ಮತ್ತೊಂದು ಮನೆಯಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಒಂದು ಬಾರಿ ಧರೆ ಕುಸಿದಿತ್ತು. ಈ ಬಾರಿಯ ಮಳೆಗಾಲದಲ್ಲೂ ಗುಡ್ಡ ಕುಸಿಯುವ ಆತಂಕವಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ತಡೆಗೋಡೆ (Retaining Wall) ನಿರ್ಮಾಣ ಮಾಡಲು ಮನೆಯವರು ಮುಂದಾಗಿದ್ದರು.

ಅದರಂತೆ ತಡೆಗೋಡೆ ನಿರ್ಮಾಣದ ಗುತ್ತಿಗೆ ಪಡೆದಿದ್ದ ಆ್ಯಂಟನಿ ಅವರು ನಿನ್ನೆ ನಾಲ್ವರು ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದರು. ತಡೆಗೋಡೆಯ ಅಳತೆ ತೆಗೆದುಕೊಳ್ಳುತ್ತಿದ್ದ ಭರದಲ್ಲಿ ಏಕಾಏಕಿ ಮೇಲ್ಭಾಗದ ಧರೆ ಜರಿದು ಬಿದ್ದಿದೆ. ಪರಿಣಾಮ ಆ್ಯಂಟನಿ ಅವರು ಮಣ್ಣಿನ ರಾಶಿಯಡಿ ಸಿಲುಕಿಕೊಂಡಿದ್ದಾರೆ. ಈ ವೇಳೆ ಜತೆಗಿದ್ದ ಕೆಲಸಗಾರರು ತಕ್ಷಣ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ.

kadaba times
kadaba times

ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ: ದುರಂತ ಸಂಭವಿಸುತ್ತಿದ್ದಂತೆ ಸ್ಥಳೀಯರು ಕದ್ರಿಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಮಣ್ಣಿನಡಿ ಸಿಲುಕಿದ್ದ ಆ್ಯಂಟನಿ ಅವರನ್ನು ಹೊರತೆಗೆಯಲು ಜಂಟಿ ಕಾರ್ಯಾಚರಣೆ ನಡೆಸಿದರು.

ದೇಹದ ಮೇಲೆ ಭಾರಿ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆ್ಯಂಟನಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಆಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles