ಕಡಬ: ಕಳಾರ ಮಲ ತ್ಯಾಜ್ಯ ಘಟಕಕ್ಕೆ ಹೈಕೋರ್ಟ್ ಬ್ರೇಕ್ ?

kadaba times

ಸ್ಥಳೀಯ ಜನವಸತಿ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಮಾರಕವಾಗುವ ರೀತಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದ ಮಲ ತ್ಯಾಜ್ಯ ಘಟಕದ (STP) ಕಾಮಗಾರಿಗೆ ಮಾನ್ಯ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

kadaba times
uniq

ಈ ಮೂಲಕ ಕಳಾರ ಪರಿಸರ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಸ್ಥಳೀಯರು ನಡೆಸುತ್ತಿದ್ದ ನಿರಂತರ ಶಾಂತಿಯುತ ಹಾಗೂ ಕಾನೂನಾತ್ಮಕ ಹೋರಾಟಕ್ಕೆ ಮೊದಲ ಹಂತದ ಮಹತ್ವದ ಜಯ ಸಿಕ್ಕಂತಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೋರಾಟದ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ್ದ ಪೆಳತೋಡಿ ಗಣೇಶ್: ಉದ್ದೇಶಿತ ಮಲ ತ್ಯಾಜ್ಯ ಘಟಕವು ನಿರ್ಮಾಣವಾಗುತ್ತಿರುವ ಜಾಗದ ತೀರಾ ಹತ್ತಿರದಲ್ಲೇ ಶ್ರೀ ಪೆಳತೋಡಿ ಗಣೇಶ್ ಅವರ ಕುಟುಂಬ ದೇವಸ್ಥಾನ ಹಾಗೂ ವಸತಿ ಗೃಹಗಳಿವೆ. ಈ ಘಟಕದಿಂದಾಗಿ ಭವಿಷ್ಯದಲ್ಲಿ ತಮ್ಮ ಕುಟುಂಬ ಹಾಗೂ ಇಡೀ ಪರಿಸರದ ನೆಮ್ಮದಿಗೆ ಭಂಗ ಬರಲಿದೆ ಮತ್ತು ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ ಎಂಬುದನ್ನು ಮನಗಂಡ ಗಣೇಶ್ ಅವರು ಮಾನ್ಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಸೌಹಾರ್ದಯುತ ವಿಚಾರಣೆ ನಡೆಸಿದ ನ್ಯಾಯಾಲಯವು ಘಟಕದ ನಿರ್ಮಾಣ ಕಾರ್ಯಕ್ಕೆ ತಾತ್ಕಾಲಿಕ ತಡೆಯಾಜ್ಞೆ (Stay Order) ನೀಡಿ ಆದೇಶಿಸಿದೆ.

ನ್ಯಾಯಾಲಯದಲ್ಲಿ ಬಲವಾದ ವಾದ ಮಂಡನೆ: ಹೈಕೋರ್ಟ್‌ನಲ್ಲಿ ಪೆಳತ್ತೋಡಿ ಗಣೇಶ್ ಅವರ ಪರವಾಗಿ ಪುತ್ತೂರಿನ ಪ್ರಸಿದ್ಧ ನ್ಯಾಯವಾದಿ ಶ್ರೀ ನಿರ್ಮಲ್ ಕುಮಾರ್ ಜೈನ್ ಅವರ ಪುತ್ರರಾದ ನ್ಯಾಯವಾದಿ ಶ್ರೀ ದಿವೀನ್ ವರ್ಮಾ ಅವರು ಹಾಜರಾಗಿ, ಸ್ಥಳೀಯರ ಪರಿಸ್ಥಿತಿ ಮತ್ತು ಪರಿಸರಕ್ಕೆ ಎದುರಾಗಿರುವ ಆತಂಕವನ್ನು ಅತ್ಯಂತ ಸಮರ್ಥವಾಗಿ ನ್ಯಾಯಾಲಯದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

kadaba times
kadaba times

ಪ್ರತಿಭಟನೆಯ ಹಾದಿ ಹಿಡಿದಿದ್ದ ಜನತೆ: ಈ ಘಟಕವು ಅತ್ಯಂತ ಸೂಕ್ಷ್ಮ ಹಾಗೂ ಜನನಿಬಿಡ ಪ್ರದೇಶದ ಮಧ್ಯಭಾಗದಲ್ಲಿ ತಲೆಯೆತ್ತುತ್ತಿತ್ತು. ಇದರ ಸುತ್ತಮುತ್ತ ಪ್ರಮುಖ ಶಾಲೆಗಳು, ಅಂಗನವಾಡಿಗಳು, ಪವಿತ್ರ ದೇವಸ್ಥಾನ-ದೈವಸ್ಥಾನಗಳು ಹಾಗೂ ವಿಶೇಷವಾಗಿ ಎಂಡೋಸಲ್ಫಾನ್ ಪೀಡಿತರ ಆಶ್ರಯ ತಾಣಗಳಿವೆ. ಈ ಮಾರಕ ಘಟಕದಿಂದಾಗಿ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗಬಹುದಾದ ತೀವ್ರ ತರಹದ ಹಾನಿಯ ಬಗ್ಗೆ ಹೋರಾಟ ಸಮಿತಿಯು ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

ಜನರ ಒಗ್ಗಟ್ಟಿಗೆ ಸಿಕ್ಕ ಪ್ರತಿಫಲ:ಇದು ಕಳಾರ ಭಾಗದ ಸಾರ್ವಜನಿಕರ ನ್ಯಾಯಸಮ್ಮತ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದ್ದು, ಮುಂದಿನ ದಿನಗಳಲ್ಲೂ ಪರಿಸರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಕಳಾರ ಪರಿಸರ ಸಂರಕ್ಷಣಾ ಹೋರಾಟ ಸಮಿತಿ ತಿಳಿಸಿದೆ. ಪತ್ರಿಕಾ ಗೋಷ್ಠಿಯಲ್ಲಿ ಸೈಮನ್ ಕಳಾರ, ಹಂಝ ಕಳಾರ,ಗಣೇಶ್  ಪೆಳತ್ತೋಡಿ, ಸೇರಿದಂತೆ ಪ್ರಮುಖರಿದ್ದರು.

Related Articles

Latest Articles