ಕಡಬ: ಮರ ಕಡಿಯುವಾಗ ಆಕಸ್ಮಿಕ ದುರಂತ; ಕೊಂಬೆ ಬಿದ್ದು ಕೂಲಿ ಕಾರ್ಮಿಕ ಸಾವು

kadaba times

ಕಡಬ: ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಕೊಂಬೆಯೊಂದು (ಗೆಲ್ಲು) ತಲೆಯ ಮೇಲೆ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ  ಘಟನೆ ಸಂಭವಿಸಿದೆ.

kadaba times
uniq

ಕಾಣಿಯೂರು ಸಮೀಪದ ಕಾಯ್ಮಣ ಗ್ರಾಮದ ಅಗಳಿ ನಿವಾಸಿ ಮೋಹನ ಎ.ಕೆ. (55 ವರ್ಷ) ಮೃತಪಟ್ಟ ದುರ್ದೈವಿ.

ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್ ಬಳಿಯ ನಿತಿನ್ ಎಂಬುವವರ ಮನೆಯ ಹತ್ತಿರವಿದ್ದ ಅಂಡಿಪುನಾರ್ ಮರವನ್ನು ಕಡಿಯುವ ಕೆಲಸದಲ್ಲಿ ಮೋಹನ ಅವರು ತಮ್ಮ ಸಹ ಕೆಲಸಗಾರ ದೇವಣ್ಣ ಅವರೊಂದಿಗೆ ತೊಡಗಿದ್ದರು. ಮರವನ್ನು ಬುಡದಿಂದ ಕಡಿದು ಕೆಳಗೆ ಬೀಳಿಸುವ ಸಂದರ್ಭದಲ್ಲಿ, ಅದಕ್ಕೆ ಕಟ್ಟಲಾಗಿದ್ದ ನೈಲಾನ್ ಹಗ್ಗವನ್ನು ಮೋಹನ ಅವರು ಎಳೆಯುತ್ತಿದ್ದರು. ಈ ವೇಳೆ ಮರದ ಬೃಹತ್ ಕೊಂಬೆಯೊಂದು ಆಕಸ್ಮಿಕವಾಗಿ ಅವರ ಮೇಲೆ ಬಿದ್ದಿದೆ.

kadaba times
kadaba times

ಪರಿಣಾಮವಾಗಿ ಮೋಹನ ಅವರು ತಲೆ ಹಾಗೂ ದೇಹಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು:

ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಸನತ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮೋಹನ ಅವರು ಪತ್ನಿ ವೇದಾವತಿ, ಪುತ್ರ ಸನತ್ ಹಾಗೂ ಪುತ್ರಿ ಪ್ರೀತಿಕಾ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Related Articles

Latest Articles