ಕಾಣಿಯೂರಿನಲ್ಲಿ ತೋಟಕ್ಕೆ ನೀರು ಹಾಯಿಸಲು ಹೋದ ವ್ಯಕ್ತಿ ಕುಸಿದು ಬಿದ್ದು ಸಾವು |Sudden Death

kadaba times

ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಾಧವ ಕೆ. (50) ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಬೆಳ್ಳಾರೆ/ಕಾಣಿಯೂರು: ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋದ ವ್ಯಕ್ತಿಯೊಬ್ಬರು ತೋಟದಲ್ಲೇ ಕುಸಿದು ಬಿದ್ದು ಅಕಾಲಿಕವಾಗಿ ಸಾವನ್ನಪ್ಪಿದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಗ್ರಾಮದಲ್ಲಿ ನಡೆದಿದೆ.

 ಕಡಬ ತಾಲೂಕಿನ ಕಾಣಿಯೂರು ಗ್ರಾಮದ ನಿವಾಸಿ ಮಾಧವ ಕೆ. (50) ಮೃತಪಟ್ಟವರು.ಏಪ್ರಿಲ್  29 ರಂದು ಬೆಳಿಗ್ಗೆ ಸುಮಾರು 8:30 ಗಂಟೆಗೆ ತಮ್ಮ ಮನೆಯ ಸಮೀಪವಿರುವ ಅಡಿಕೆ ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು.

kadaba times
kadaba times

ಸುಮಾರು 9:00 ಗಂಟೆಯ ವೇಳೆಗೆ ಮಾಧವ ಅವರ ಮೊಬೈಲ್ ಫೋನ್‌ಗೆ ಕರೆ ಬಂದಿದ್ದು, ಫೋನ್ ನೀಡಲೆಂದು ಅವರ ಪುತ್ರಿ  ತೋಟಕ್ಕೆ ಹೋಗಿದ್ದಾರೆ. ಈ ವೇಳೆ ತಂದೆಯು ತೋಟದಲ್ಲಿ ಕುಸಿದು ಬಿದ್ದಿರುವುದನ್ನು ಕಂಡು ಆಕೆ ಕಿರುಚಿಕೊಂಡಿದ್ದಾರೆ. ಮಗಳ ಬೊಬ್ಬೆ ಕೇಳಿ ಮನೆಯಲ್ಲಿದ್ದ ಪತ್ನಿ, ಪುತ್ರ ಅಹಿಜಿತ್ ಕೆ.ಎಂ. ಹಾಗೂ ಸಂಬಂಧಿಕರು ತೋಟಕ್ಕೆ ಓಡಿ ಬಂದಿದ್ದಾರೆ.

 ತಕ್ಷಣವೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಾಧವ ಅವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬೆಳಿಗ್ಗೆ 10:00 ಗಂಟೆಯ ವೇಳೆಗೆ ಪರೀಕ್ಷಿಸಿದ ವೈದ್ಯರು, ಮಾಧವ ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಅಹಿಜಿತ್ ಕೆ.ಎಂ. ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ 15/2026 ರಂತೆ, ಕಲಂ 194 BNSS 2023 (ಹಿಂದಿನ 174 CRPC) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles