‘ಹಾಯ್’ ಹೇಳಿದ ವಿಷಯಕ್ಕೆ ಶುರುವಾದ ಗಲಾಟೆ; ಇತ್ತಂಡಗಳ ನಡುವೆ ಮಾರಾಮಾರಿ

kadaba times

ಪರಿಚಯಸ್ಥರ ನಡುವೆ ಶುರುವಾದ ಸಣ್ಣ ವಿಷಯವೊಂದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ ಘಟನೆ ನಡೆದಿದೆ. ಎರಡೂ ತಂಡದವರು ನೀಡಿದ ದೂರಿನನ್ವಯ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

kadaba times
uniq

ಸುಳ್ಯ: ಪರಿಚಯಸ್ಥರು ಪರಸ್ಪರ ವಿಶ್ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ನಡುವೆ ಗಲಾಟೆ ನಡೆದು, ಪ್ರಕರಣ ಪೊಲೀಸ್ ಮೆಟ್ಟಿಲೇರಿರುವ ಘಟನೆ ಸುಳ್ಯ ತಾಲ್ಲೂಕಿನ ಅರಂಬೂರು ಕಾಫಿ ಡೇ ಬಳಿ ಏಪ್ರಿಲ್ 23ರಂದು ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಸುಶಾಂತ್ ಎನ್. ಮತ್ತು ಜೀವಿತ್ ಎಂಬುವವರು ಪರಸ್ಪರ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಶಾಂತ್ ನೀಡಿದ ದೂರಿನ ಸಾರಾಂಶ: ಅರಂಬೂರು ಪಾಲಡ್ಕ ನಿವಾಸಿ ಸುಶಾಂತ್ ಎನ್. ಅವರು ನೀಡಿರುವ ದೂರಿನ ಪ್ರಕಾರ, ಏಪ್ರಿಲ್ 23ರ ಸಂಜೆ ಉಡುಪಿ ಗಾರ್ಡನ್ ಬಳಿ ಜೀವಿತ್ ಬೈಕಿನಲ್ಲಿ ಹೋಗುತ್ತಿದ್ದಾಗ ಸುಶಾಂತ್ ‘ಹಾಯ್’ ಎಂದು ವಿಶ್ ಮಾಡಿದ್ದರು. ಆದರೆ ಜೀವಿತ್ ಗಮನಿಸದೆ ಹೋದಾಗ, ಸುಶಾಂತ್ ಫೋನ್ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಜೀವಿತ್ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಸುಶಾಂತ್ ಹಾಗೂ ಹರ್ಷ ಅರಂಬೂರು ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಓಮ್ನಿ ಕಾರಿನಲ್ಲಿ ಬಂದ ಜೀವಿತ್, ಧನುಷ್ ಮತ್ತು ಆಕಾಶ್ ಎಂಬುವವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

kadaba times
kadaba times

ಜೀವಿತ್ ನೀಡಿದ ದೂರಿನ ಸಾರಾಂಶ: ಇದೇ ಘಟನೆಗೆ ಸಂಬಂಧಿಸಿ ಕಲ್ಲುಗುಂಡಿಯ ಜೀವಿತ್ ಕೂಡ ಪ್ರತಿದೂರು ನೀಡಿದ್ದಾರೆ. ಸುಶಾಂತ್ ವಿಶ್ ಮಾಡಿದ್ದನ್ನು ತಾವು ಗಮನಿಸಿರಲಿಲ್ಲ. ಆದರೆ ಈ ವಿಚಾರವಾಗಿ ಸುಶಾಂತ್ ಫೋನ್ ಮಾಡಿ ಕೆಟ್ಟ ಭಾಷೆಯಲ್ಲಿ ನಿಂದಿಸಿ ಸೊಂಟ ಮುರಿಯುವ ಬೆದರಿಕೆ ಹಾಕಿದ್ದರು ಎಂದು ಜೀವಿತ್ ದೂರಿನಲ್ಲಿ ಹೇಳಿದ್ದಾರೆ. ರಾತ್ರಿ ವೇಳೆ ಜೀವಿತ್ ತನ್ನ ಸ್ನೇಹಿತರಾದ ಧನುಷ್ ಮತ್ತು ಆಕಾಶ್ ಅವರೊಂದಿಗೆ ಅರಂಬೂರು ಕಾಫಿ ಡೇ ಬಳಿ ತಿಂಡಿ ತಿನ್ನಲು ಹೋಗಿದ್ದಾಗ, ಸುಶಾಂತ್ ಮತ್ತು ಹರ್ಷ ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿದ್ದು, ಸದ್ಯ ಸುಳ್ಯ ಪೊಲೀಸರು ಎರಡೂ ಕಡೆಯವರ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Latest Articles