ಕೊಕ್ಕಡದ ಬಾರ್ ನಲ್ಲಿ ಗಲಾಟೆ: ಐವರ ವಿರುದ್ದ FIR ದಾಖಲು

kadaba times

ನೆಲ್ಯಾಡಿ ಸಮೀಪದ ಕೊಕ್ಕಡದ ಬಾರ್‌ವೊಂದರಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಧರ್ಮಸ್ಥಳ ಪೊಲೀಸರು ಐವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ

kadaba times
uniq

ನೆಲ್ಯಾಡಿ:  ಸಣ್ಣಪುಟ್ಟ ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಇದೀಗ ಐವರ ಮೇಲೆ ಪೊಲೀಸ್ ಪ್ರಕರಣ ದಾಖಲಾಗುವಂತೆ ಮಾಡಿದೆ.

ಮಾ.29ರಂದು ರಾತ್ರಿ ಕೊಕ್ಕಡದ ನಿವಾಸಿ ಅಕ್ಷಯ್ (31) ಎಂಬವರು ಸ್ಥಳೀಯ ‘ಬಾರ್ ಆಂಡ್ ರೆಸ್ಟೋರೆಂಟ್’ನಲ್ಲಿ ಮದ್ಯ ಸೇವಿಸಲು ಕುಳಿತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಯತೀಶ್ ಎಂಬಾತ ಹಳೆಯ ಹಣಕಾಸಿನ ವಿಚಾರವನ್ನು ಮುಂದಿಟ್ಟುಕೊಂಡು ಅಕ್ಷಯ್ ಜೊತೆಗೆ ತಕರಾರು ತೆಗೆದಿದ್ದಾನೆ. ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಯತೀಶ್‌ಗೆ ಸಾಥ್ ನೀಡಿದ ಆತನ ಸ್ನೇಹಿತರಾದ ಯತೀಶ, ಧನುಷ್ ಭಂಡಾರಿ, ಶರತ್ ಭಂಡಾರಿ ಮತ್ತು ಪ್ರವೀಣ್ ಎಂಬವರು ಕೂಡ ಅಕ್ಷಯ್ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

kadaba times
kadaba times

ಗಾಯಾಳು ಅಕ್ಷಯ್ ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಂಯಮ ಕಳೆದುಕೊಂಡು ಕಾನೂನು ಕೈಗೆತ್ತಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಬದಲು ಹಲ್ಲೆ, ಬೆದರಿಕೆಗೆ ಮುಂದಾದರೆ ಭವಿಷ್ಯದ ಬದುಕು ಪೊಲೀಸ್ ಕಚೇರಿ ಮತ್ತು ನ್ಯಾಯಾಲಯದ ಸುತ್ತ ಅಲೆಯಬೇಕಾಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ನೆನಪಿರಲಿ.

Related Articles

Latest Articles