
ಕಡಬದ ಸರಸ್ವತಿ ಶಾಲೆಯ ಸಮೀಪದ ಅಂಗಡಿ ಮಾಲೀಕರು ಹಾಗೂ ಹಿರಿಯ ಟ್ರ್ಯಾಕ್ಸ್ ಟೆಂಪೋ ಚಾಲಕರಾಗಿದ್ದ ಗೋಪಾಲ ಗೌಡ ಸಂಕೇಶ ಅವರು ನಿಧನರಾಗಿದ್ದಾರೆ.


ಕಡಬ: ಇಲ್ಲಿನ ಸರಸ್ವತಿ ವಿದ್ಯಾಲಯದ ಸಮೀಪ ದಶಕಗಳಿಂದ ಗೂಡಂಗಡಿ ನಡೆಸುತ್ತಿದ್ದ ಹಿರಿಯರಾದ ಗೋಪಾಲ ಗೌಡ ಸಂಕೇಶ ಅವರು ಶುಕ್ರವಾರ ರಾತ್ರಿ ನಿಧನರಾದರು.
ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.


ಸರಳ ಸಜ್ಜನಿಕೆಯ ವ್ಯಕ್ತಿತ್ವ: ಸರಸ್ವತಿ ಶಾಲೆಯ ಬಳಿ ಸಣ್ಣ ಅಂಗಡಿ ನಡೆಸುತ್ತಾ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಚಿರಪರಿಚಿತರಾಗಿದ್ದ ಇವರು, ಅತ್ಯಂತ ಸರಳ ಸ್ವಭಾವದವರಾಗಿದ್ದರು. ಕಡಬ ಉಪ್ಪಿನಂಗಡಿ ಟ್ಯಾಕ್ಸಿ ಟೆಂಪೋ ಸೇವೆಯಲ್ಲಿ ಬಹಳ ಕಾಲ ತೊಡಗಿಸಿಕೊಂಡಿದ್ದ ಇವರು, ಪ್ರಯಾಣಿಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು.
ಇವರ ನಿಧನಕ್ಕೆ ಸ್ಥಳೀಯ ವರ್ತಕರು,ಊರಿನ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
