
ಕಡಬದ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಏಪ್ರಿಲ್ 22 ರಂದು ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಶಂಕರ ಜಯಂತ್ಯುತ್ಸವ ನಡೆಯಲಿದೆ. ಕಾರ್ಯಕ್ರಮದ ಪೂರ್ಣ ವಿವರ ಇಲ್ಲಿದೆ


ಕಡಬ: ಕಡಬ ತಾಲೂಕಿನ ಭಕ್ತರ ಆರಾಧ್ಯ ಕೇಂದ್ರವಾದ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಶಂಕರ ಜಯಂತ್ಯುತ್ಸವವು ದಿನಾಂಕ ಎಪ್ರಿಲ್ 22 ಬುಧವಾರ ಅತ್ಯಂತ ವೈಭವದಿಂದ ಜರುಗಲಿದೆಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ದಿನದ ಧಾರ್ಮಿಕ ಕಾರ್ಯಕ್ರಮಗಳ ವಿವರ: ದಿನವಿಡೀ ದೇವಸ್ಥಾನದಲ್ಲಿ ಭಕ್ತಿಪೂರ್ವಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ: ಬೆಳಿಗ್ಗೆ 8.00 ಗಂಟೆಗೆ: ಶ್ರೀ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಅಥರ್ವ ಶೀರ್ಷಾಭಿಷೇಕ ಮತ್ತು ಅಪೂಪ ಪೂಜೆ. ಶ್ರೀ ಶಂಕರಾಚಾರ್ಯ ಸನ್ನಿಧಿಯಲ್ಲಿ ರುದ್ರಾಭಿಷೇಕ ಹಾಗೂ ಶ್ರೀದೇವಿ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ, ಪಂಚಾಮೃತಾಭಿಷೇಕ ಮತ್ತು ಕಲಶಾಭಿಷೇಕಗಳು ಜರುಗಲಿವೆ. ಮಧ್ಯಾಹ್ನ 12.30ಕ್ಕೆ: ಮಹಾಪೂಜೆ ನಡೆದು, ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.


ಭಜನಾ ಸೇವೆ: ಬೆಳಿಗ್ಗೆ 8.30 ರಿಂದ ಕಡಬದ ಶ್ರೀ ಜಯದುರ್ಗಾಪರಮೇಶ್ವರೀ ಮಹಿಳಾ ಭಜನಾ ಮಂಡಳಿ ಹಾಗೂ ಪುತ್ತೂರಿನ ಮಿತ್ರ ಸಮಾಜ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ.ಸಂಜೆ 4.00 ಗಂಟೆಗೆ: ಸಾಮೂಹಿಕ ಪುಷ್ಪ ಮತ್ತು ಕುಂಕುಮಾರ್ಚನೆ (ದುರ್ಗಾ ಅಷ್ಟೋತ್ತರ ಜಪದೊಂದಿಗೆ).
ಶಂಕರ ಜಯಂತಿ ಹಾಗೂ ವಿಶೇಷ ಉಪನ್ಯಾಸ: ಸಂಜೆ 5.00 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಂಘ ಕಡಬ ಇವರ ವತಿಯಿಂದ ಶಂಕರ ಅಷ್ಟೋತ್ತರ ಪಠಣದೊಂದಿಗೆ ಶಂಕರ ಜಯಂತಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಶ್ರೀಮತಿ ಗೀತಾ ಕುಮಾರಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ ಚಂಡೀಪಾರಾಯಣ, ದೀಪಾರಾಧನೆ, ಉತ್ಸವ ಬಲಿ ಮತ್ತು ದರ್ಶನ ಬಲಿ ನಡೆಯಲಿದೆ.
