ಸಂಚಾರಿ ಸ್ಟುಡಿಯೋ ಮುಖ್ಯಸ್ಥ ಜೈಲಿನಿಂದ ಬಿಡುಗಡೆ

kadaba times

ಬೆಂಗಳೂರಿನ ನ್ಯಾಯಾಲಯದ ವಾರಂಟ್ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಸಂಚಾರಿ ಸ್ಟುಡಿಯೋದ ಸಂತೋಷ್ ಕಡಬ 30 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. 

kadaba times
uniq

ಕಡಬ:  ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಖ್ಯಾತಿಯ ಸಂತೋಷ್ ಮರ್ದಾಳ  ಅವರು 30 ದಿನಗಳ ಸುದೀರ್ಘ ನ್ಯಾಯಾಂಗ ಬಂಧನದ ಬಳಿಕ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನ ಶೀನಪ್ಪ ಎಂಬವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ, ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು (Misc.1424/2024) ಸಂತೋಷ್ ಕಡಬ ವಿರುದ್ಧ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಬೆಂಗಳೂರು ಪೊಲೀಸರು ಕಡಬ ತಾಲೂಕಿನ ಮರ್ದಾಳದಲ್ಲಿರುವ ಸಂತೋಷ್ ಅವರ ಸ್ಟುಡಿಯೋಗೆ ಬೈಲಿಫ್ (Bailiff) ಅವರೊಂದಿಗೆ ಆಗಮಿಸಿ ಅವರನ್ನು ವಶಕ್ಕೆ ಪಡೆದಿದ್ದರು.

kadaba times
kadaba times

ಪೊಲೀಸರು ಬಂಧಿಸಲು ಬಂದ ಸಂದರ್ಭದಲ್ಲಿ  ಸಂತೋಷ್, “ನಾನೇನು ತಪ್ಪು ಮಾಡಿಲ್ಲ, ನ್ಯಾಯಾಲಯದ ಆದೇಶಕ್ಕೆ ಗೌರವ ಕೊಟ್ಟು ಜೈಲಿಗೂ ಬರಲು ಸಿದ್ಧನಿದ್ದೇನೆ” ಎಂದು ಹೇಳುತ್ತಾ ಪೊಲೀಸ್ ವಾಹನವೇರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಸಂತೋಷ್ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್ ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿರುವ ಫೋಟೋಗಳು ಹರಿದಾಡುತ್ತಿದೆ.

Related Articles

Latest Articles