ಕಡಬ: ಗುತ್ತಿಗೆದಾರ, ಬಾಲಜಿ ಪವರ್ ಟೂಲ್ಸ್ ಮಾಲಕ ಹೃದಯಾಘಾತಕ್ಕೆ ಬಲಿ

kadaba times

ಕಡಬ: ಇಲ್ಲಿನ ಉದ್ಯಮಿ, ಬಾಲಜಿ ಪವರ್ ಟೂಲ್ಸ್ ಸಂಸ್ಥೆಯ ಮಾಲಕ ಹಾಗೂ ಪ್ರಸಿದ್ಧ ರೈಲ್ವೇ ಗುತ್ತಿಗೆದಾರರಾಗಿದ್ದ ರಾಮಚಂದ್ರ (55) ಅವರು ಮಾರ್ಚ್ 28 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

kadaba times
uniq

​ಘಟನೆಯ ವಿವರ:

ಮೂಲತಃ ಪುತ್ತೂರಿನ ಸೂತ್ರಬೆಟ್ಟು ನಿವಾಸಿಯಾಗಿದ್ದ ಇವರು, ಪ್ರಸ್ತುತ ಕಡಬದ ಕಳಾರದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು. ಮಾ. 27 ರಂದು ರಾತ್ರಿ ಆಲಂಕಾರಿನಲ್ಲಿ ನಡೆಯುತ್ತಿರುವ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಮರಳಿದ್ದರು. ಬಳಿಕ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.

​ತಕ್ಷಣವೇ ಅವರನ್ನು ಕಡಬದ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾದರೂ, ಅಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

​ವೃತ್ತಿ ಜೀವನ ಮತ್ತು ಸಮಾಜಸೇವೆ:

kadaba times
kadaba times

ರಾಮಚಂದ್ರರವರು ಕಳೆದ ಹಲವಾರು ವರ್ಷಗಳಿಂದ ರೈಲ್ವೇ ಕಾಂಟ್ರಾಕ್ಟರ್ ಆಗಿ ಗುರುತಿಸಿಕೊಂಡಿದ್ದರು. ನೆಟ್ಟದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದ ರೈಲ್ವೇ ವೆಲ್ಡಿಂಗ್ ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ಕಡಬದಲ್ಲಿ ಸಿದ್ದವಾಗುತ್ತಿರುವ ನ್ಯಾಯಾಲಯಕ್ಕೆ ಸಂಬಂಧಿಸಿದ ಮೂಲಸೌಕರ್ಯದ ಗುತ್ತಿಗೆಯನ್ನು ಕೂಡ ಇವರೇ ನಿರ್ವಹಿಸಿದ್ದರು.

​ತನ್ನ ಗುತ್ತಿಗೆ ಕೆಲಸಗಳಲ್ಲಿ ಸ್ಥಳೀಯ ಅನೇಕ ಯುವಕರಿಗೆ ಉದ್ಯೋಗ ನೀಡುವ ಮೂಲಕ ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಇವರ ನಿಧನಕ್ಕೆ ಹಲವಾರು ಗಣ್ಯರು ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Related Articles

Latest Articles