
ಬಿ. ಟಿ. ಮಹೇಶ್ಚಂದ್ರ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಕಡಬ ತಾಲೂಕು ಬಿಲ್ಲವ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ. ಸತೀಶ್ ಕೆ. ಐತ್ತೂರು ನೂತನ ಸ್ಥಾಪಕ ಅಧ್ಯಕ್ಷರು.


ಕಡಬ: ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ (ರಿ.) ಕಾರ್ಯದರ್ಶಿ ಬಿ. ಟಿ. ಮಹೇಶ್ಚಂದ್ರ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಹಿಂದೆ ಕಡಬ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸಲು ಬಿಲ್ಲವ ಸಂಚಾಲನ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯ ಸಕ್ರಿಯ ಕಾರ್ಯವೈಖರಿಯ ಮುಂದುವರಿದ ಭಾಗವಾಗಿ ಈಗ ಪೂರ್ಣ ಪ್ರಮಾಣದ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.ಸಮಾಜದ ಏಳಿಗೆ ಮತ್ತು ಸಂಘಟನೆಯ ಬಲವರ್ಧನೆಗಾಗಿ ಈ ನೂತನ ತಂಡವು ಶ್ರಮಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ನೂತನ ಪದಾಧಿಕಾರಿಗಳ ಪಟ್ಟಿ:
-
ಸ್ಥಾಪಕಾಧ್ಯಕ್ಷರು: ಸತೀಶ್ ಕೆ. ಐತ್ತೂರು
-
ಉಪಾಧ್ಯಕ್ಷರು: ಅಜಿತ್ ಪಾಲೇರಿ, ರವಿ ಮಾಯಿಲ್ಗ, ಗೀತಾ ಉಂಡಿಲ
-
ಕಾರ್ಯದರ್ಶಿ: ಮಿಥುನ್ ಸುಂದರ್ ಪಲ್ಲತ್ತಡ್ಕ


-
ಜೊತೆ ಕಾರ್ಯದರ್ಶಿಗಳು: ಲಕ್ಷ್ಮೀಶ್ ಬಂಗೇರ ಪೆಲತ್ತೊಡಿ, ಅಶ್ವಥ್ ಸಾಂತ್ಯ, ಕೃಷ್ಣಪ್ಪ ಅಮೈ
-
ಕೋಶಾಧಿಕಾರಿ: ಸಂತೋಷ್ ಕುಮಾರ್ ಮರಕ್ಕಡ
ಸಮಿತಿ ಸದಸ್ಯರು: ದಿನೇಶ್ ಕೇಪುಲು, ಉಮೇಶ್ ಪೂಜಾರಿ ಬಳ್ಪ, ವಸಂತ ಪೂಜಾರಿ ಬದಿಬಾಗಿಲು, ಅಭಿಲಾಷ್ ಪಿ. ಕೆ. ಕಲ್ಲುಗುಡ್ಡೆ, ಸಂತೋಷ್ ಗುಂಡ್ಯ, ಉಮೇಶ್ ಕಾರ್ಲಾಡಿ, ಬಾಲಕೃಷ್ಣ ಬಣಜಾಲು, ಡಾ. ರವಿ ಕಕ್ಕೇಪದವು ಹಾಗೂ ಬಾಲಕೃಷ್ಣ ನೂಜಾಡಿ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರು ಹಾಗೂ ಸಲಹೆಗಾರರು: ಗೌರವ ಸಲಹೆಗಾರರಾಗಿ ಜಿನ್ನಪ್ಪ ಸಾಲ್ಯಾನ್ ಕಡಬ ಮತ್ತು ವಿಜಯಕುಮಾರ್ ಸೊರಕೆ ಆಯ್ಕೆಯಾಗಿದ್ದಾರೆ. ಸಲಹೆಗಾರರಾಗಿ ನಾರಾಯಣ ಪೂಜಾರಿ ಪಾಲಪ್ಪೆ, ಆನಂದ ಟೈಲರ್, ಉಷಾ ಅಂಚನ್, ಅಶೋಕ್ ಕೊಯಿಲ, ಲಿಂಗಪ್ಪ ಪೂಜಾರಿ ಕೇಪುಲು, ಶಶಿಧರನ್ ಕಟ್ಟತ್ತಡ್ಕ, ಕುಮಾರಿ ವಾಸುದೇವನ್, ಸಂತೋಷ್ ಮಾತ್ರಾಡಿ ಹಾಗೂ ಡಾ. ಸದಾನಂದ ಕುಂದರ್ ನೆಲ್ಯಾಡಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
