ಕಡಬದಲ್ಲಿ ಕಾಡು ಕೋಣ ಹತ್ಯೆ ಕೇಸ್: ಆರೋಪಿ ಎಂದು ಹೆಸರಿಸಲ್ಪಟ್ಟಿದ್ದ ಮತ್ತೊರ್ವನಿಗೆ ಜಾಮೀನು ಮಂಜೂರು

kadaba times

ಐತ್ತೂರು ಗ್ರಾಮದ ಮುಜೂರು ಮೀಸಲು ಅರಣ್ಯದಲ್ಲಿ ಕಾಡುಕೋಣ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವನಿಗೆ    ಪುತ್ತೂರು ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಸದ್ಯ ಈ ಪ್ರಕರಣಡಲ್ಲಿ ಏಳು ಮಂದಿಯನ್ನು ಅರಣ್ಯ ಇಲಾಖೆ ಗುರುತಿಸಿದಂತಾಗಿದೆ.

kadaba times
uniq

ಕಡಬ: ತಾಲೂಕಿನ ಐತ್ತೂರು ಗ್ರಾಮದ ಮುಜೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಕಾಡುಕೋಣ (Indian Gaur) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯಿಂದ ಆರೋಪಿ ಎಂದು ಹೆಸರಿಸಲ್ಪಟ್ಟಿದ್ದ ಪ್ರಸಾದ್ ಎಂಬವರಿಗೆ ಪುತ್ತೂರು ನ್ಯಾಯಾಲಯವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಘಟನೆಯ ವಿವರ: ಕಳೆದ ಜನವರಿ 25 ರಂದು ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳು ಐತ್ತೂರು ಗ್ರಾಮದ ಅರಬ್ಬಿತ್ತೋಡು ಎಂಬಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ವನ್ಯಜೀವಿ ಹತ್ಯೆ ನಡೆಸಿ ಮಾಂಸ ತಯಾರಿಸುತ್ತಿದ್ದ ತಂಡವೊಂದು ಅರಣ್ಯ ಸಿಬ್ಬಂದಿಯನ್ನು ಕಂಡು ಪರಾರಿಯಾಗಿತ್ತು ಎಂದು ಇಲಾಖೆ ತಿಳಿಸಿತ್ತು. ಘಟನಾ ಸ್ಥಳದಲ್ಲಿ ಪತ್ತೆಯಾದ ಸಾಕ್ಷ್ಯಗಳ ಆಧಾರದ ಮೇಲೆ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಪ್ರಕರಣದಲ್ಲಿ ಈ ಹಿಂದೆ ಮಣಿಗಂಡನ್, ಭುವನೇಶ್ವರ, ಜೀವನ್, ಸಚಿನ್, ಜೈನ್ ವರ್ಕಿ ಮತ್ತು ಜಸ್ಟಿನ್ ಜೈನ್ ಎಂಬುವವರನ್ನು ಇಲಾಖೆ ಗುರುತಿಸಿತ್ತು. ಅವರು ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇದೀಗ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಮತ್ತೋರ್ವ ವ್ಯಕ್ತಿ ಪ್ರಸಾದ್ ಅವರಿಗೂ ನ್ಯಾಯಾಲಯ ರಿಲೀಫ್ ನೀಡಿದೆ.

ನ್ಯಾಯಾಲಯದ ವಾದ-ಪ್ರತಿವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಅರ್ಜಿದಾರರ ಮೇಲೆ ಹೊರಿಸಲಾಗಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಘಟನಾ ಸ್ಥಳದಲ್ಲಿ ಅವರು ಇರಲಿಲ್ಲ ಮತ್ತು ಅವರ ಬಳಿ ಯಾವುದೇ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ. ತನಿಖೆಯ ಹಂತದಲ್ಲಿ ಅವರನ್ನು ವಿನಾಕಾರಣ ಸಿಲುಕಿಸಲಾಗಿದೆ” ಎಂದು ಪ್ರತಿಪಾದಿಸಿದರು.ತಾನು ಕೃಷಿಕನಾಗಿದ್ದು, ಸಮಾಜದಲ್ಲಿ ಗೌರವ ಹೊಂದಿದ್ದು, ತನಿಖೆಗೆ ಸಹಕರಿಸುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

kadaba times
kadaba times

ಸರ್ಕಾರಿ ಅಭಿಯೋಜಕರು ಜಾಮೀನು ಅರ್ಜಿಯನ್ನು ವಿರೋಧಿಸಿ, “ಆರೋಪಿತ ವ್ಯಕ್ತಿಯು ಈ ಹಿಂದೆಯೂ ಅರಣ್ಯ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಆರೋಪಿಯು ಈ ಹಿಂದೆಯೂ ಮರಗಳ ಕಳ್ಳಸಾಗಣೆ ಮತ್ತು ಜಿಂಕೆ ಕೊಂಬುಗಳನ್ನು ಇಟ್ಟುಕೊಂಡಿರುವ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವಾದಿಸಿದರು. ಪ್ರಾಣಿ ಹತ್ಯೆಗೆ ಬಳಸಿದ ಕೋವಿ ಇನ್ನು ಪತ್ತೆಯಾಗಬೇಕಿದೆ ಮತ್ತು ಈತ ವೃತ್ತಿಪರ ಅಪರಾಧಿಯಾಗಿದ್ದಾನೆ ಎಂದು ತಿಳಿಸಿದ್ದರು. ಹತ್ಯೆಗೆ ಬಳಸಿದ ಆಯುಧಗಳ ಪತ್ತೆಗಾಗಿ ಅವರ ವಿಚಾರಣೆ ಅಗತ್ಯವಿದೆ” ಎಂದು ವಾದ ಮಂಡಿಸಿದರು. 

ಜಾಮೀನು ಮಂಜೂರಾತಿ: ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ. ಅವರು, ಎಫ್‌ಐಆರ್‌ನಲ್ಲಿ ಅರ್ಜಿದಾರರ ಹೆಸರು ನೇರವಾಗಿ ಉಲ್ಲೇಖವಿಲ್ಲದಿರುವುದನ್ನು ಗಮನಿಸಿದರು. ಅಲ್ಲದೆ, ಪ್ರಕರಣದ ಸ್ವರೂಪವನ್ನು ಪರಿಗಣಿಸಿ  ಶರತ್ತುಗಳೊಂದಿಗೆ ಜಾಮೀನು ನೀಡಿದ್ದಾರೆ.

₹50,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಒದಗಿಸಬೇಕು, ಮುಂದಿನ 15 ದಿನಗಳೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು.ಪ್ರತಿ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಿ ಸಹಿ ಮಾಡಬೇಕು, ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಮತ್ತು ಯಾವುದೇ ಸಾಕ್ಷ್ಯಗಳನ್ನು ನಾಶಪಡಿಸಬಾರದು. ಅರಣ್ಯ ಇಲಾಖೆಯು ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಸಂಶಯಿತರು ಎಂದು ಗುರುತಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ.

Related Articles

Latest Articles