Court Order Violation:ನ್ಯಾಯಾಲಯದ ಆದೇಶ ಉಲ್ಲಂಘಿಸಿದ ‘ಸಂಚಾರಿ ಸ್ಟುಡಿಯೋ’ ಮುಖ್ಯಸ್ಥ ಪೊಲೀಸರ ವಶಕ್ಕೆ

kadaba times

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದ ಆರೋಪದ ಮೇರೆಗೆ  ಯೂಟ್ಯೂಬರ್ ಸಂತೋಷ್ ಕಡಬಗೆ  30 ದಿನಗಳ ಜೈಲು ಶಿಕ್ಷೆ ವಿಧಿಸಿರುವುದಾಗಿ ತಿಳಿದು ಬಂದಿದೆ. ಇಲ್ಲಿದೆ ಪೂರ್ಣ ವಿವರ

kadaba times
uniq

ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಇನ್ನೊಬ್ಬರ ನಂಬಿಕೆಯನ್ನು ಅಥವಾ ಪವಿತ್ರ ಕ್ಷೇತ್ರಗಳ ಘನತೆಯನ್ನು ಹಾಳು ಮಾಡುವ ಆಯುಧವಾಗಬಾರದು ಎಂಬುದಕ್ಕೆ ಇಂದು ಬೆಂಗಳೂರು ನ್ಯಾಯಾಲಯ ನೀಡಿದ ತೀರ್ಪು ಸಾಕ್ಷಿಯಾಗಿದೆ.  ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸತತವಾಗಿ ಅವಹೇಳನಕಾರಿ ವಿಡಿಯೋಗಳನ್ನು ಮಾಡುತ್ತಿದ್ದ ‘ಸಂಚಾರಿ ಸ್ಟುಡಿಯೋ’ ಖ್ಯಾತಿಯ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ಇಂದು (ಫೆಬ್ರವರಿ 18) ವಶಕ್ಕೆ ಪಡೆದಿದ್ದಾರೆ.

ಕಳೆದ ಕೆಲವು ಸಮಯದಿಂದ ‘ಸಂಚಾರಿ ಸ್ಟುಡಿಯೋ’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಸಂತೋಷ್ ಕಡಬ ಅವರು ಧರ್ಮಸ್ಥಳದ ಕುರಿತು ವಿವಾದಾತ್ಮಕ ಹಾಗೂ ಅವಹೇಳನಕಾರಿ ಅಂಶಗಳನ್ನು ಬಿತ್ತರಿಸುತ್ತಿದ್ದರು ಎನ್ನಲಾಗಿದೆ.   ಇದು ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿತ್ತು. ಈ ವಿಚಾರವಾಗಿ ನ್ಯಾಯಾಲಯವು ಈ ಹಿಂದೆಯೇ ಕಟ್ಟುನಿಟ್ಟಿನ ಆದೇಶ ನೀಡಿ, ಇಂತಹ ಯಾವುದೇ ವಿಡಿಯೋಗಳನ್ನು ಪ್ರಸಾರ ಮಾಡಬಾರದು ಎಂದು ಸೂಚಿಸಿತ್ತು.ಆದರೆ, ನ್ಯಾಯಾಲಯದ ಆದೇಶ ಪಾಲಿಸದೆ ಮತ್ತೆ ಅದೇ ಹಾದಿ ಹಿಡಿದಿದ್ದರು.ಇದೀಗ  ನ್ಯಾಯಾಲಯವು  30 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

kadaba times
kadaba times

ನ್ಯಾಯಾಲಯದ ಶಿಕ್ಷೆಯ ಆದೇಶ ಹೊರಬೀಳುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಬೆಂಗಳೂರು ಪೊಲೀಸರು ಮತ್ತು ಕೋರ್ಟ್ ಸಿಬ್ಬಂದಿ ಕಡಬಕ್ಕೆ ಆಗಮಿಸಿದ್ದರು. ಸಂತೋಷ್ ತನ್ನ ಅಂಗಡಿಯಲ್ಲಿದ್ದಾಗಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಕಳುಹಿಸುವ ಪ್ರಕ್ರಿಯೆಗಳು ನಡೆಯಲಿವೆ.

ಶ್ರೀ ಕ್ಷೇತ್ರದ ಪರವಾಗಿ ಹಿರಿಯ ವಕೀಲರಾದ ರಾಜಶೇಖರ್ ಹಿರಿಯಾರು ಅವರು ನ್ಯಾಯಾಲಯದಲ್ಲಿ ಗಟ್ಟಿ ಧ್ವನಿಯನ್ನ ಎತ್ತಿದ್ದರು. ಸಾಮಾಜಿಕ ಜಾಲತಾಣಗಳು ಸಮಾಜವನ್ನು ತಿದ್ದುವಂತಿರಬೇಕೇ ಹೊರತು, ಧಾರ್ಮಿಕ ನಂಬಿಕೆಗಳನ್ನು ಮತ್ತು ಪವಿತ್ರ ಕ್ಷೇತ್ರಗಳನ್ನು ನಿಂದಿಸುವ ಅಡ್ಡೆಗಳಾಗಬಾರದು ಎಂದು ವಾದ ಮಂಡಿಸಿದ್ದರು.

Related Articles

Latest Articles