Viral Video- ನಾನೇನು ತಪ್ಪು ಮಾಡಿಲ್ಲ, ಜೈಲಿಗೂ ಬರಲು ಸಿದ್ಧನಿದ್ದೇನೆ- ಸಂಚಾರಿ ಸ್ಟುಡಿಯೋ ಸಂತೋಷ್

kadaba times

ಬೆಂಗಳೂರು ನ್ಯಾಯಾಲಯದ ಆದೇಶದಂತೆ ಸಂಚಾರಿ ಸ್ಟುಡಿಯೋ ಸಂತೋಷ್ ಕಡಬ ದಸ್ತಗಿರಿ. ಸಿವಿಲ್ ಪ್ರಕರಣದಲ್ಲಿ ಜೈಲು ಶಿಕ್ಷೆ ಮತ್ತು ಬೈಲಿಫ್ ಪಾತ್ರದ ಬಗ್ಗೆ ಕಾನೂನಾತ್ಮಕ ಮಾಹಿತಿ ಇಲ್ಲಿದೆ.

kadaba times
uniq

ಬೆಂಗಳೂರಿನ ಶೀನಪ್ಪ ಎಂಬವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ, ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು (Misc.1424/2024) ಹೊರಡಿಸಿದ ವಾರಂಟ್ ಹಿನ್ನೆಲೆಯಲ್ಲಿ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್‌ನ ಸಂತೋಷ್ ಕಡಬ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಅವರನ್ನು 30 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಡಬ ತಾಲೂಕಿನ ಮರ್ದಳದಲ್ಲಿರುವ ತಮ್ಮ ಸ್ಟುಡಿಯೋದಲ್ಲಿ ಸಂತೋಷ್ ಅವರು ಕಾರ್ಯನಿರತರಾಗಿದ್ದ ವೇಳೆ ಬೆಂಗಳೂರು ಪೊಲೀಸರು ಬೈಲಿಫ್ (Bailiff) ಅವರೊಂದಿಗೆ ಆಗಮಿಸಿದ್ದರು.    ನ್ಯಾಯಾಲಯದ ಆದೇಶದಂತೆ ಅವರನ್ನು ವಶಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್, “ನಾನೇನು ತಪ್ಪು ಮಾಡಿಲ್ಲ, ನ್ಯಾಯಾಲಯದ ಆದೇಶಕ್ಕೆ ಗೌರವ ಕೊಟ್ಟು ಜೈಲಿಗೂ ಬರಲು ಸಿದ್ಧನಿದ್ದೇನೆ” ಎಂದು ಹೇಳುತ್ತಾ ಪೊಲೀಸ್ ವಾಹನವೇರಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಾಮಾನ್ಯವಾಗಿ ಆಸ್ತಿ ಅಥವಾ ಮಾನನಷ್ಟದಂತಹ ಸಿವಿಲ್ ಪ್ರಕರಣಗಳಲ್ಲಿ ನೇರವಾಗಿ ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಲು ಪ್ರಮುಖ ಕಾನೂನು ಕಾರಣಗಳಿವೆ: ನ್ಯಾಯಾಂಗ ನಿಂದನೆ (Contempt of Court): ನ್ಯಾಯಾಲಯವು ಒಂದು ಕೆಲಸವನ್ನು ‘ಮಾಡಬೇಡ’ ಎಂದು ಆದೇಶಿಸಿದ ಮೇಲೆಯೂ ಅದನ್ನು ಮುಂದುವರಿಸಿದರೆ, ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ.

ಸಿವಿಲ್ ಪ್ರಕ್ರಿಯಾ ಸಂಹಿತೆ (CPC): ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ವ್ಯಕ್ತಿಯನ್ನು ಶಿಕ್ಷಿಸಲು ಮತ್ತು ಆದೇಶ ಪಾಲಿಸುವಂತೆ ಮಾಡಲು ‘ಸಿವಿಲ್ ಜೈಲಿಗೆ’ ಕಳುಹಿಸುವ ಅಧಿಕಾರ ನ್ಯಾಯಾಧೀಶರಿಗಿದೆ.

kadaba times
kadaba times

ಎಚ್ಚರಿಕೆಯ ಕ್ರಮ: 30 ದಿನಗಳ ಈ ಶಿಕ್ಷೆಯು ಕೇವಲ ದಂಡನೆಯಲ್ಲ, ಬದಲಿಗೆ ನ್ಯಾಯಾಂಗದ ಘನತೆಯನ್ನು ಕಾಪಾಡುವ ಮತ್ತು ಕಾನೂನಿನ ಆದೇಶಗಳನ್ನು ಗಾಳಿಗೆ ತೂರಬಾರದು ಎಂಬ ಎಚ್ಚರಿಕೆಯಾಗಿದೆ.

ಬೈಲಿಫ್ (Bailiff)ಪಾತ್ರವೇನು?:   ಈ ಪ್ರಕರಣದಲ್ಲಿ ನ್ಯಾಯಾಲಯವು ‘ಬೈಲಿಫ್’ ಅವರಿಗೆ ದಸ್ತಗಿರಿ ವಾರಂಟ್ ನೀಡಿತ್ತು. ಬೈಲಿಫ್ ಎಂದರೆ ನ್ಯಾಯಾಲಯದ ಆದೇಶಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಅಧಿಕೃತ ಅಧಿಕಾರಿ. ಆಸ್ತಿ ಮುಟ್ಟುಗೋಲು ಅಥವಾ ವ್ಯಕ್ತಿಯ ಬಂಧನದಂತಹ ಆದೇಶವಿದ್ದಾಗ, ಬೈಲಿಫ್ ಅವರು ಸ್ಥಳಕ್ಕೆ ಹೋಗಿ ಪೊಲೀಸರ ಸಹಾಯದೊಂದಿಗೆ ಆ ಕಾರ್ಯವನ್ನು ಪೂರೈಸುತ್ತಾರೆ.

ಸಂತೋಷ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಸೌಜನ್ಯ ಹೋರಾಟದ ಮುಂಚೂಣಿಯಲ್ಲಿರುವ ಗಿರೀಶ್ ಮಟ್ಟಣ್ಣನವರ್ ಅವರು ಫೇಸ್‌ಬುಕ್ ಲೈವ್ ಬಂದು, “ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ” ಎಂದು ಸಂತೋಷ್‌ಗೆ ಬೆಂಬಲ ಸೂಚಿಸಿದ್ದಾರೆ. ಒಂದು ವರ್ಗವು ಇದನ್ನು ಕಾನೂನಿನ ಕ್ರಮ ಎಂದು ಬೆಂಬಲಿಸುತ್ತಿದ್ದರೆ, ಮತ್ತೊಂದು ವರ್ಗವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತುತ್ತಿದೆ.

Related Articles

Latest Articles