Dog Attack-ಮೀಟರ್ ರೀಡಿಂಗ್ ವೇಳೆ ಮೆಸ್ಕಾಂ ಸಿಬ್ಬಂದಿ ಮೇಲೆ ಸಾಕು ನಾಯಿ ದಾಳಿ

ಸರಪಳಿ ತುಂಡರಿಸಿಕೊಂಡು ಬಂದ ನಾಯಿ

kadaba times

ಮೀಟರ್ ರೀಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಮೆಸ್ಕಾಂ ಹೊರಗುತ್ತಿಗೆ ಮೇಲ್ವಿಚಾರಕ ಸಂಪತ್ ಅವರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿದ್ದು, ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

kadaba times
uniq

ವಿದ್ಯುತ್ ಮೀಟರ್ ರೀಡಿಂಗ್ ಮಾಡುತ್ತಿದ್ದ ಮೆಸ್ಕಾಂ ಹೊರಗುತ್ತಿಗೆ ಸಿಬ್ಬಂದಿಯೋರ್ವರ ಮೇಲೆ ಸಾಕು ನಾಯಿಯೊಂದು ಸರಪಳಿ ತುಂಡರಿಸಿಕೊಂಡು ಬಂದು ದಾಳಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ: ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಗಾಯಗೊಂಡ ದುರ್ದೈವಿ. ಇವರು ಬಂಟ್ವಾಳ ಮೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೂಪರ್ ವೈಸರ್ (Supervisor) ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಹತ್ತು ತಿಂಗಳಿನಿಂದ ಮೀಟರ್ ರೀಡಿಂಗ್ ಸಿಬ್ಬಂದಿಯ ಕೊರತೆ ಇದ್ದ ಕಾರಣ, ಸಂಪತ್ ಅವರೇ ಖುದ್ದಾಗಿ ರಾಯಿ ಕೈತ್ರೋಡಿ ಕ್ವಾರ್ಟರ್ಸ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮೀಟರ್ ರೀಡಿಂಗ್ ಕೆಲಸ ನಿರ್ವಹಿಸುತ್ತಿದ್ದರು.

kadaba times
kadaba times

ಸರಪಳಿ ತುಂಡರಿಸಿಕೊಂಡು ಬಂದ ನಾಯಿ: ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಂಪತ್ ಅವರು ರಾಯಿ ಕೈತ್ರೋಡಿ ಎಂಬಲ್ಲಿ ಮನೆಯೊಂದರ ಮೀಟರ್ ರೀಡಿಂಗ್ ಮುಗಿಸಿ, ರಸ್ತೆಯಲ್ಲಿದ್ದ ತಮ್ಮ ಬೈಕ್ ಬಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮನೆಯಂಗಳದಲ್ಲಿದ್ದ ಸಾಕು ನಾಯಿಯು ಹಠಾತ್ತನೆ ತನ್ನ ಸರಪಳಿಯನ್ನು ತುಂಡರಿಸಿಕೊಂಡು ಬಂದು ಸಂಪತ್ ಅವರ ಮೇಲೆರಗಿದೆ.

ಗಂಭೀರ ಗಾಯ: ನಾಯಿಯ ಭೀಕರ ದಾಳಿಯಿಂದಾಗಿ ಸಂಪತ್ ಅವರ ಬಲ ಕೈ ಹಾಗೂ ಕಾಲಿಗೆ ಆಳವಾದ ಗಾಯಗಳಾಗಿವೆ. ಕೂಡಲೇ ಅವರನ್ನು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

Latest Articles