ಬಿಳಿನೆಲೆಯಲ್ಲಿ ಸುಳಿಗಾಳಿಗೆ ನೆಲಕ್ಕುರುಳಿದ ಅಡಿಕೆ ಮರಗಳು

kadaba times

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಸುಳಿಗಾಳಿ ಸಹಿತ ಸುರಿದ ಮಳೆಗೆ ಕೃಷಿಕರ ಅಡಿಕೆ ಮರಗಳು ನಾಶವಾಗಿವೆ. ಮುಂದಿನ ದಿನಗಳ ಹವಮಾನ ವರದಿ ಇಲ್ಲಿದೆ.

kadaba times
uniq

ಕಡಬ: ರಾಜ್ಯದ ಹಲವೆಡೆ ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯಾಗುತ್ತಿದ್ದು,  ಕಡಬ ತಾಲೂಕಿನಾದ್ಯಂತ ಗುಡುಗು ಸಹಿತ ಬಿರುಗಾಳಿ ಮಳೆ ಅಬ್ಬರಿಸಿದೆ.

ಬಿಳಿನೆಲೆ ಗ್ರಾಮದ ಚಿದ್ಗಾಲ್ ಎಂಬಲ್ಲಿ ಬೀಸಿದ ಭೀಕರ ಸುಳಿಗಾಳಿಗೆ ಕೃಷಿಕರ ತೋಟದ ಅಡಿಕೆ ಮರಗಳು ಧರೆಗುರುಳಿ ಅಪಾರ ನಷ್ಟ ಸಂಭವಿಸಿದೆ. ಗಾಳಿಯ ವೇಗಕ್ಕೆ ಹತ್ತಾರು ಫಲಭರಿತ ಅಡಿಕೆ ಮರಗಳು ಮುರಿದು ಬಿದ್ದಿದೆ.

kadaba times
kadaba times

ಹಠಾತ್ ಸುರಿದ ಮಳೆ ಹಾಗೂ ಬಿರುಗಾಳಿಯಿಂದಾಗಿ ತಾಲೂಕಿನ ಹಲವೆಡೆ ಜನಜೀವನ ವ್ಯಸ್ತಗೊಂಡಿದೆ. ಅಡಿಕೆ ಕೊಯ್ಲು ಹಾಗೂ ಒಣಗಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದ ಕೃಷಿಕರಿಗೆ ಈ ಅಕಾಲಿಕ ಮಳೆ ಭಾರೀ ಅಡಚಣೆಯನ್ನುಂಟು ಮಾಡಿದೆ.

 ಹವಮಾನ ಇಲಾಖೆಯ ಸೂಚನೆಯಂತೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಫೆಬ್ರವರಿ 27 ರಿಂದ ಮಾರ್ಚ್ 3ರವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಲಿದ್ದು, ಒಣಹವೆ ಇರಲಿದೆ ಎಂದು ಅಂದಾಜಿಸಲಾಗಿದೆ.

Related Articles

Latest Articles