ಆಲಂಕಾರಿನಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರ ದಾಳಿ: ಬೋಟ್ ಸೇರಿದಂತೆ ಹಲವು ಸೊತ್ತು ಜಪ್ತಿ

kadaba times

ಕಡಬ ತಾಲೂಕಿನ ಅಲಂಕಾರು ಗ್ರಾಮದ ನಾಡ್ತಿಲ ಎಂಬಲ್ಲಿ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಅಡ್ಡೆಗೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಲಾರಿಗಟ್ಟಲೆ ಮರಳು ಮತ್ತು ಬೋಟ್ ವಶಕ್ಕೆ ಪಡೆಯಲಾಗಿದೆ.

kadaba times
uniq

ಕಡಬ: ತಾಲೂಕಿನ ಅಲಂಕಾರು ಗ್ರಾಮದ ನಾಡ್ತಿಲ ಬೇಲಿಕಲ್ಲು ಎಂಬಲ್ಲಿ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಹೊರತೆಗೆದು ಸಂಗ್ರಹಿಸುತ್ತಿದ್ದ ಅಡ್ಡೆಗೆ ಕಡಬ ಪೊಲೀಸರು ಬುಧವಾರ ಸಂಜೆ ಮಿಂಚಿನ ದಾಳಿ ನಡೆಸಿದ್ದಾರೆ. ಪೊಲೀಸರ ಆಗಮನದ ಸುಳಿವು ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ವಿವರ: ಕಡಬ ಪೊಲೀಸ್ ಉಪನಿರೀಕ್ಷಕರಾದ ಜಂಬುರಾಜ್ ಮಹಾಜನ್ ಅವರಿಗೆ ಫೆಬ್ರವರಿ 18ರಂದು ಮಧ್ಯಾಹ್ನ 3:30ರ ಸುಮಾರಿಗೆ ಅಲಂಕಾರು ಗ್ರಾಮದ ನಾಡ್ತಿಲ ಎಂಬಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅವರು, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದರು.

ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಮರಳು ದಂಧೆಯಲ್ಲಿ ತೊಡಗಿದ್ದ ಅಪರಿಚಿತ ವ್ಯಕ್ತಿಗಳು ಸೊತ್ತುಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಸ್ಥಳವನ್ನು ಪರಿಶೀಲಿಸಿದಾಗ ನದಿಯ ದಂಡೆಯಲ್ಲಿ ದೊಡ್ಡ ಪ್ರಮಾಣದ ಮರಳು ಮತ್ತು ಮರಳು ತೆಗೆಯಲು ಬಳಸುವ ಸಲಕರಣೆಗಳು ಪತ್ತೆಯಾಗಿವೆ.

kadaba times
kadaba times

ಜಪ್ತಿಯಾದ ಸೊತ್ತುಗಳು: ಸ್ಥಳದಲ್ಲಿ ಪಂಚನಾಮೆ ನಡೆಸಿದ ಪೊಲೀಸರು  ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನದಿಯ ದಡದಲ್ಲಿದ್ದ ಸುಮಾರು 1.5 ಲಾರಿ ಲೋಡ್ ಹಸಿ ಮರಳು (ಅಂದಾಜು ಮೌಲ್ಯ 15,000 ರೂ.)ಮರಳು ಸಾಗಾಟಕ್ಕೆ ಬಳಸುತ್ತಿದ್ದ ಒಂದು ಕಬ್ಬಿಣದ ಬೋಟ್ (ಅಂದಾಜು ಮೌಲ್ಯ 10,000 ರೂ.)ಕಬ್ಬಿಣದ ಮೆಟ್ಟಿಲುಗಳು, ಲಂಗರು, ಸಲಕೆಗಳು, ಪ್ಲಾಸ್ಟಿಕ್ ಬುಟ್ಟಿಗಳು ಮತ್ತು ಹಗ್ಗ ಸೇರಿದಂತೆ ಇತರೆ ಪರಿಕರಗಳು.

ಕಾನೂನು ಕ್ರಮ: ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 18/2026 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ (1994), MMDR ಆಕ್ಟ್ 1957 ಹಾಗೂ ಬಿಎನ್‌ಎಸ್ (BNS-2023) ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಜಂಬುರಾಜ್ ಮಹಾಜನ್ ಅವರೊಂದಿಗೆ ಸಿಬ್ಬಂದಿಗಳಾದ ಸಿದ್ದಪ್ಪ ಹೂಗಾರ, ವಿಠ್ಠಲ ಎಮ್ ಜಿ ಮತ್ತು ಮಹೇಶ್ ಭಾಗವಹಿಸಿದ್ದರು.

Related Articles

Latest Articles