ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿ ಮೊಣಗಂಟು ಬದಲಾವಣೆ ಶಸ್ತ್ರಚಿಕಿತ್ಸೆ

ಗ್ರಾಮೀಣ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

kadaba times

ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಗೋಳಿತ್ತೊಟ್ಟು ಮೂಲದ ಮಹಿಳೆಗೆ ಯಶಸ್ವಿ ‘ಟೋಟಲ್ ನೀ ರಿಪ್ಲೇಸ್‌ಮೆಂಟ್’ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಗ್ರಾಮೀಣ ಪ್ರದೇಶದ ಆಸ್ಪತ್ರೆಯೊಂದು ದೊಡ್ಡ ಸಾಧನೆ ಮಾಡಿದೆ.

kadaba times
uniq

ಗ್ರಾಮೀಣ ಭಾಗದ ಜನರ ಪಾಲಿಗೆ ಸಂಜೀವಿನಿಯಂತಿರುವ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯೊಂದು ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ . ಸಾಮಾನ್ಯವಾಗಿ ಸುಸಜ್ಜಿತ ನಗರಗಳ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅತ್ಯಂತ ಕ್ಲಿಷ್ಟಕರವಾದ  ಸಂಪೂರ್ಣ ಮೊಣಗಂಟು ಬದಲಾವಣೆ (Total Knee Replacement) ಶಸ್ತ್ರಚಿಕಿತ್ಸೆಯನ್ನು ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ.

12 ವರ್ಷಗಳ ನೋವಿಗೆ ಸಿಕ್ಕಿತು ಮುಕ್ತಿ:

ಗೋಳಿತ್ತೊಟ್ಟು ಗ್ರಾಮದ ಮಹಿಳೆಯೊಬ್ಬರು ಕಳೆದ 12 ವರ್ಷಗಳಿಂದ ತೀವ್ರವಾದ ಮೊಣಗಂಟು ನೋವಿನಿಂದ ಬಳಲುತ್ತಿದ್ದರು. ನಡೆಯಲು ಕೂಡ ಅಸಾಧ್ಯವಾಗಿ ಸಂಕಷ್ಟ ಅನುಭವಿಸುತ್ತಿದ್ದ ಅವರಿಗೆ, ಅಶ್ವಿನಿ ಆಸ್ಪತ್ರೆಯ ವೈದ್ಯರು ಆಧುನಿಕ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

kadaba times
kadaba times

ತಜ್ಞ ವೈದ್ಯರ ತಂಡದ ಸಾಧನೆ

ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಪರಿಣಿತ ವೈದ್ಯರ ತಂಡವು ಮುನ್ನಡೆಸಿತು. ತಂಡದಲ್ಲಿಡಾ. ಶರತ್ ಬಾಲೆಮನೆ,ಡಾ. ಶಮಂತ್ ವೈ.ಕೆ,ಡಾ. ನಿಶಾಂತ್, ಡಾ. ಮಹಿನ್ ಇವರುಗಳನ್ನೊಳಗೊಂಡ ತಂಡವು ಅತ್ಯಂತ ಜಾಗರೂಕತೆಯಿಂದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇವರಿಗೆ ಅನೆಸ್ತೇಷಿಯಾ ವಿಭಾಗದಲ್ಲಿ ಡಾ. ಅನಿಶ್ ಹಾಗೂ ಶುಶ್ರೂಷಕಿಯರಾದ ಲೀಲಾವತಿ ಮತ್ತು ಬಿನ್ಸಿ ಸಾಥ್ ನೀಡಿದ್ದಾರೆ.

ಜೀವ ರಕ್ಷಕವಾಗಿ ಅಶ್ವಿನಿ ಆಸ್ಪತ್ರೆ

ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಅಶ್ವಿನಿ ಆಸ್ಪತ್ರೆಯು ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಲೈಫ್ ಸಪೋರ್ಟ್ ಆಂಬುಲೆನ್ಸ್ ಮೂಲಕ ಪುತ್ತೂರು ಅಥವಾ ಮಂಗಳೂರಿಗೆ ರವಾನಿಸುವ ವ್ಯವಸ್ಥೆಯನ್ನೂ ಇದು ಹೊಂದಿದೆ.

Related Articles

Latest Articles