ಕಡಬ | ನೀರಿನ ಟ್ಯಾಂಕ್ ತೊಳೆಯಲು ಹೋದ ಕೃಷಿಕ ತಾರಸಿಯಿಂದ ಬಿದ್ದು ಮೃತ್ಯು

kadaba times

ಕಡಬ ತಾಲೂಕಿನ ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್‌ನಲ್ಲಿ ನೀರಿನ ಟ್ಯಾಂಕ್ ತೊಳೆಯಲು ಹೋದ ಕೃಷಿಕ ಪದ್ಮನಾಭ ಗೌಡ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಕೃಷಿ ಹಾಗೂ ಆಟೋ ಚಾಲನೆಯ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದ ಜೀವವೊಂದು ಮರೆಯಾಗಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

kadaba times
uniq

ಕಡಬ: ಕುಟುಂಬಕ್ಕೆ ಆಸರೆಯಾಗಬೇಕಿದ್ದ ಜೀವವೊಂದು ಸಣ್ಣ ಅಚಾತುರ್ಯಕ್ಕೆ ಬಲಿಯಾದ ಇಹೃದಯವಿದ್ರಾವಕ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.

ಎರ್ಮೆತ್ತಿಮಾರ್ ನಿವಾಸಿ ಪದ್ಮನಾಭ ಗೌಡ (55 ವ.) ಅವರು ಮೃತಪಟ್ಟ ದುರ್ದೈವಿ.  ಶ್ರಮಜೀವಿ ಕೃಷಿಕರಾಗಿದ್ದ ಪದ್ಮನಾಭ ಗೌಡ ಅವರು, ಇತ್ತೀಚಿನ ದಿನಗಳಲ್ಲಿ ಆಟೋ ಚಾಲನೆ ಮಾಡುತ್ತಾ ಕುಟುಂಬವನ್ನು ಮುನ್ನಡೆಸುತ್ತಿದ್ದರು.

ಬುಧವಾರ ರಾತ್ರಿ ಮನೆಯ ಮಹಡಿಯ ಮೇಲಿರುವ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಉದ್ದೇಶದಿಂದ ಅವರು ತಾರಸಿಗೆ ಏರಿದ್ದರು. ಆದರೆ, ಕತ್ತಲಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಆಕಸ್ಮಿಕವಾಗಿ ತಾರಸಿಯ ಮೇಲೆಯೇ ಬಿದ್ದಿದ್ದಾರೆ.

kadaba times
kadaba times

ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲಾಗಲೇ ವಿಧಿಯ ಆಟ ಮುಗಿದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಪದ್ಮನಾಭ ಗೌಡ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಕೃಷಿ ಕೆಲಸದ ಜೊತೆಗೆ ಆಟೋ ಚಾಲಕರಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮನೆಯ ಯಜಮಾನನ ಅಕಾಲಿಕ ನಿಧನ ಕುಟುಂಬಕ್ಕೆ ಆಘಾತ ನೀಡಿದೆ.

Related Articles

Latest Articles