
ಕಡಬ ಪಟ್ಟಣ ಪಂಚಾಯತಿನ ಕಾನೂನು ಸಲಹೆಗಾರರಾಗಿ ಅರ್ಪಿತ ಪಿ. ನೇಮಕಗೊಂಡಿದ್ದಾರೆ. ಶ್ರೀ ಗಣೇಶ್ ಬಿಲ್ಡಿಂಗ್ನ ಮಾಲೇಶ್ವರ ಲಾ ಚೇಂಬರ್ನಲ್ಲಿ ಇವರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ


ಕಡಬ: ಪಟ್ಟಣ ಪಂಚಾಯತಿನ ಕಾನೂನು ಸಂಬಂಧಿತ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವ ನಿಟ್ಟಿನಲ್ಲಿ, ಕಾನೂನು ಸಲಹೆಗಾರರಾಗಿ ಅರ್ಪಿತ ಪಿ. ಅವರನ್ನು ನೇಮಕಗೊಳಿಸಿ ಪಟ್ಟಣ ಪಂಚಾಯತ್ ಆಡಳಿತವು ಅಧಿಕೃತ ಆದೇಶ ಹೊರಡಿಸಿದೆ.
ಅರ್ಪಿತ ಪಿ. ಅವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ ಈ ನೇಮಕಾತಿ ಪ್ರಕ್ರಿಯೆ ನಡೆದಿದೆ. ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ (ನಡವಳಿ ಸಂಖ್ಯೆ: ಕ.ಪಂ/ಸಾ.ಸ.ಸ/ಸಂಖ್ಯೆ: 49-2025/26) ಇವರ ನೇಮಕಕ್ಕೆ ಸರ್ವಾನುಮತದ ಅನುಮೋದನೆ ದೊರೆತಿದೆ.


ಜವಾಬ್ದಾರಿಗಳು: ನೂತನ ಕಾನೂನು ಸಲಹೆಗಾರರಾಗಿ ಅರ್ಪಿತ ಪಿ. ಅವರು ಪಟ್ಟಣ ಪಂಚಾಯಿತಿಯ ಕಾನೂನು ವ್ಯಾಜ್ಯಗಳ ನಿರ್ವಹಣೆ, ದಾಖಲೆಗಳ ಕಾನೂನಾತ್ಮಕ ಪರಿಶೀಲನೆ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ಅಗತ್ಯವಿರುವ ಕಾನೂನು ಮಾರ್ಗದರ್ಶನ ನೀಡಲಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನೇಮಕಗೊಂಡ ಅರ್ಪಿತ ಪಿ. ಅವರು ಪ್ರಸ್ತುತ ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ನಲ್ಲಿರುವ ‘ಮಾಲೇಶ್ವರ ಲಾ ಚೇಂಬರ್’ ನಲ್ಲಿ ವಕೀಲರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
