ಕಡಬ:ಪತ್ನಿ, ಮಗು ನಾಪತ್ತೆ – ಆತ್ಮಹತ್ಯೆಗೆ ಯತ್ನಸಿದ ಪತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

kadaba times

ಕಡಬ ತಾಲೂಕಿನ ರಾಮಕುಂಜದ ಮಹಿಳೆ ಮತ್ತು 4 ವರ್ಷದ ಮಗು ನಾಪತ್ತೆ. ಬೆಂಗಳೂರಿನಿಂದ ಬಂದಿದ್ದ ಪತಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲು.

kadaba times
uniq

ಕಡಬ: ಪತ್ನಿ ಮತ್ತು ಮಗು ನಿಗೂಢವಾಗಿ ನಾಪತ್ತೆಯಾಗಿದ್ದು, ಪತಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ.

​ಏನಿದು ಘಟನೆ?;್:   ಕೊಯಿಲ ಗ್ರಾಮದ ಮುನೀರ್ ಎಂಬವರು ಕೆಲಸಕ್ಕಾಗಿ ಪತ್ನಿ ನೇಹಾ (26) ಮತ್ತು ಮಗ ಮೊಹಮ್ಮದ್ ನಿಯಾಲ್ (4) ಅವರೊಂದಿಗೆ ಬೆಂಗಳೂರಿನಲ್ಲಿದ್ದರು. ಕಳೆದ ಡಿಸೆಂಬರ್ 25 ರಂದು ಮುನೀರ್ ಒಬ್ಬನೇ ಊರಿಗೆ ಬಂದಿದ್ದನು. ಪತ್ನಿ ಎಲ್ಲಿ ಎಂದು ಕೇಳಿದ್ದಕ್ಕೆ, ಇನ್ನೆರಡು ದಿನದಲ್ಲಿ ಬರುತ್ತಾರೆ ಎಂದು ಮನೆಯವರಿಗೆ ತಿಳಿಸಿದ್ದ

kadaba times
kadaba times

​ಆತ್ಮಹತ್ಯೆಗೆ ಯತ್ನ:  ಇದ್ದಕ್ಕಿದ್ದಂತೆ ಮುನೀರ್ ರಾಮಕುಂಜದಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ   ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಮಾತನಾಡಲಾಗದ ಸ್ಥಿತಿಯಲ್ಲಿದ್ದಾನೆ.

​ನಾಪತ್ತೆಯಾದ ತಾಯಿ-ಮಗು: ಇತ್ತ ಮುನೀರ್ ಪತ್ನಿ ನೇಹಾ ಹಾಗೂ 4 ವರ್ಷದ ಮಗು ಮರಳಿ ಬಂದಿಲ್ಲ. ಅವರ ಫೋನ್ ಸಂಖ್ಯೆಗಳೂ ಸ್ವಿಚ್ ಆಫ್ ಆಗಿವೆ. ಬೆಂಗಳೂರಿನಿಂದ ಪತಿಯ ಜೊತೆಗಿದ್ದವರು ಈಗ ಎಲ್ಲಿ ಹೋದರು ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಮುನೀರ್ ಅಕ್ಕ ಹಾಜಿರಾಬಿ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ​ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Latest Articles