ಕಡಬ: ಕೊಣಾಜೆ ನೆಕ್ಕಜೆ ಕಿಂಡಿ ಅಣೆಕಟ್ಟು ನೀರು ಮಲೀನ; ಪ್ಯಾಂಪರ್ಸ್ ಎಸೆದವರ ವಿರುದ್ಧ ದೂರು | Kadaba Konaje Dam Pollution News

kadaba times

ಕಡಬ ತಾಲೂಕಿನ ಕೊಣಾಜೆ ಗ್ರಾಮದ ನೆಕ್ಕಜೆ ಕಿಂಡಿ ಅಣೆಕಟ್ಟು ನೀರಿಗೆ ಪ್ಯಾಂಪರ್ಸ್ ಎಸೆದು ಮಲೀನಗೊಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಲೋಕಯ್ಯ ಗೌಡರಿಂದ ಪಂಚಾಯತ್‌ಗೆ ದೂರು. ಸಂಪೂರ್ಣ ಮಾಹಿತಿ ಇಲ್ಲಿದೆ

kadaba times
uniq

ಕಡಬ: ತಾಲೂಕಿನ ಕೊಣಾಜೆ ಗ್ರಾಮದ ನೆಕ್ಕಜೆ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನ ನೀರಿಗೆ ಬಳಸಿದ ಮಕ್ಕಳ ಪ್ಯಾಂಪರ್ಸ್ ಎಸೆದು ನೀರನ್ನು ಮಲೀನಗೊಳಿಸಿರುವ  ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ಥಳೀಯ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಕಯ್ಯ ಗೌಡ ಅವರು ಕಡ್ಯ ಕೊಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

kadaba times
kadaba times

ಸಣ್ಣ ನೀರಾವರಿ ಇಲಾಖೆಯಿಂದ 2009ರಲ್ಲಿ ನೆಕ್ಕಜೆಯಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗಿತ್ತು. ಈ ಭಾಗದ  ಜನರು ದಿನನಿತ್ಯದ ಬಳಕೆ ಹಾಗೂ ಕೃಷಿ ಕಾರ್ಯಗಳಿಗಾಗಿ ಇದೇ ಅಣೆಕಟ್ಟಿನ ನೀರನ್ನು ಅವಲಂಬಿಸಿದ್ದಾರೆ. ಆದರೆ, ಸ್ಥಳೀಯರೊಬ್ಬರು ಪರಿಸರ ಪ್ರಜ್ಞೆ ಇಲ್ಲದೆ, ಮಕ್ಕಳಿಗೆ ಬಳಸಿದ ಪ್ಯಾಂಪರ್ಸ್‌ಗಳನ್ನು ನೇರವಾಗಿ ಅಣೆಕಟ್ಟಿನ ನೀರಿಗೆ ಎಸೆದಿದ್ದಾರೆ.

ಜನರ ಜೀವನಾಡಿಯಾಗಿರುವ ನೀರಿಗೆ ಈ ರೀತಿ ಕಸ ಎಸೆಯುವುದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಿದೆ. ಆದ್ದರಿಂದ, ಪಂಚಾಯತ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಸಾರ್ವಜನಿಕ ಕೆರೆ-ಕಟ್ಟೆಗಳನ್ನು ಮಲೀನಗೊಳಿಸುವವರ ವಿರುದ್ಧ  ಕಾನೂನು ಕ್ರಮ ಜರುಗಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಲೋಕಯ್ಯ ಗೌಡ ಒತ್ತಾಯಿಸಿದ್ದಾರೆ.

Related Articles

Latest Articles