ಗ್ಯಾರೇಜ್‌ನಿಂದ ಗ್ಲೋಬಲ್ ಸಾಮ್ರಾಜ್ಯದವರೆಗೆ : ಯುವಕರಿಗೆ ಸ್ಫೂರ್ತಿಯಾಗಿದ್ದ ಒಡೆಯ ರಾಯ್ ಸಾವಿಗೆ ಶರಣಾಗಿದ್ದೇಕೆ?

kadaba times

ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ. ಸಿ.ಜೆ. ರಾಯ್ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿಯಿಂದ ಮನನೊಂದು ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಯುವಕರಿಗೆ ಸ್ಫೂರ್ತಿಯಾಗಿದ್ದ ಒಡೆಯದ್ದಾರೆ. ಅವರ ಸಾಧನೆ ಹಾಗೂ ಉದ್ಯಮದ ಸಂಪೂರ್ಣ ವಿವರ ಇಲ್ಲಿದೆ.

kadaba times
uniq

ಬೆಂಗಳೂರು: ಕರ್ನಾಟಕ ಮತ್ತು ಕೇರಳದಾದ್ಯಂತ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ಕಟ್ಟಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಮತ್ತು ಚೇರ್ಮನ್ ಡಾ. ಸಿ.ಜೆ. ರಾಯ್ (57) ಅವರು ಶುಕ್ರವಾರದಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್‌ಫರ್ಡ್ ಟೌನ್‌ನಲ್ಲಿರುವ ತಮ್ಮ ಕಂಪನಿಯ ಕಚೇರಿಯಲ್ಲೇ ಅವರು ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಘಟನೆಯು ಇಡೀ ಉದ್ಯಮ ವಲಯದಲ್ಲಿ ತೀವ್ರ ಆಘಾತವನ್ನು ಮೂಡಿಸಿದೆ.

ಕಳೆದ ಎರಡು-ಮೂರು ದಿನಗಳಿಂದ ಸಿ.ಜೆ. ರಾಯ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದರು. ಶುಕ್ರವಾರವೂ ಕೂಡ ಐಟಿ ಅಧಿಕಾರಿಗಳು ಕಚೇರಿಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ, ಇದರಿಂದ ತೀವ್ರವಾಗಿ ನೊಂದಿದ್ದ ರಾಯ್ ಅವರು ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ಸ್ವಯಂಪ್ರೇರಿತವಾಗಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಸಣ್ಣ ಮಟ್ಟದಿಂದ ಸಾವಿರಾರು ಕೋಟಿಯ ಒಡೆಯನವರೆಗೆ ಮೂಲತಃ ಕೇರಳದವರಾಗಿದ್ದರೂ ಸಿ.ಜೆ. ರಾಯ್ ಅವರು ತಮ್ಮ ಉದ್ಯಮದ ಬೇರನ್ನು ಬೆಂಗಳೂರಿನಲ್ಲೇ ಗಟ್ಟಿಯಾಗಿ ಊರಿದ್ದರು. ಎಂಬಿಎ ಮುಗಿಸಿ 1997ರವರೆಗೆ ಎಚ್‌ಪಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು, ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಕೇವಲ 30×40 ಅಡಿಯ ಸಣ್ಣ ಜಾಗದಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದ್ದರು. ಶ್ರಮ ಮತ್ತು ಚಾಣಾಕ್ಷತನದಿಂದ ಕಾನ್ಫಿಡೆಂಟ್ ಗ್ರೂಪ್ ಅನ್ನು ಉತ್ತುಂಗಕ್ಕೇರಿಸಿದ್ದ ರಾಯ್, ಇಂದು ಸಾವಿರಾರು ಎಕರೆ ಭೂಮಿಗೆ ಒಡೆಯರಾಗಿದ್ದರು. ಭಾರತ ಮಾತ್ರವಲ್ಲದೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲೂ ಇವರ ಉದ್ಯಮ ಹರಡಿಕೊಂಡಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಸ್ವಿಟ್ಜರ್‌ಲ್ಯಾಂಡ್ ಹಾಗೂ ಫ್ರಾನ್ಸ್‌ನಿಂದ ಪಿಎಚ್‌ಡಿ ಪದವಿ ಪಡೆದಿದ್ದ ಇವರು, ದೇಶದ ಪ್ರಭಾವಿ ಮತ್ತು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.

kadaba times
kadaba times

ಲಕ್ಸುರಿ ಕಾರುಗಳ ಕ್ರೇಜ್ ಮತ್ತು ಸರಳ ವ್ಯಕ್ತಿತ್ವ ಸಿ.ಜೆ. ರಾಯ್ ಅವರಿಗೆ ಐಷಾರಾಮಿ ಕಾರುಗಳೆಂದರೆ ಅಪಾರ ಆಸಕ್ತಿ ಇತ್ತು. ಅವರ ಬಳಿ ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರುಗಳು, ಲ್ಯಾಂಬೋರ್ಗಿನಿ ಹಾಗೂ 10 ಕೋಟಿ ರೂಪಾಯಿ ಬೆಲೆಬಾಳುವ ಫ್ಯಾಂಟೋಮ್-8 ಸೇರಿದಂತೆ ಅತ್ಯಾಧುನಿಕ ಸ್ಫೋರ್ಟ್ಸ್‌ ಕಾರುಗಳ ಸಂಗ್ರಹವೇ ಇತ್ತು. ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದರೂ, ಅವರು ಯುವಕರಿಗೆ ಬ್ಯುಸಿನೆಸ್ ಪಾಠಗಳನ್ನು ಹೇಳಿಕೊಡುವ ಮೂಲಕ ಸದಾ ಸ್ಫೂರ್ತಿಯಾಗಿದ್ದರು.

ಕಲೆ ಮತ್ತು ಸಮಾಜಸೇವೆಯಲ್ಲಿ ಮುಂದು ಕೇವಲ ರಿಯಲ್ ಎಸ್ಟೇಟ್ ಮಾತ್ರವಲ್ಲದೆ ಸಿನಿಮಾ ಮತ್ತು ರಿಯಾಲಿಟಿ ಶೋಗಳಿಗೂ ಇವರು ಬೆನ್ನೆಲುಬಾಗಿ ನಿಂತಿದ್ದರು. ಮಲಯಾಳಂನ ಬಿಗ್ ಬಜೆಟ್ ಸಿನಿಮಾ ‘ಕ್ಯಾಸನೋವಾ’ ನಿರ್ಮಿಸಿದ್ದ ಇವರು, ಕನ್ನಡ ಮತ್ತು ಮಲಯಾಳಂನ ಬಿಗ್ ಬಾಸ್ ರಿಯಾಲಿಟಿ ಶೋಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದರು. ಜೀ ಕನ್ನಡದ ‘ಸರಿಗಮಪ’ ವಿಜೇತರಿಗೆ 50 ಲಕ್ಷ ಬೆಲೆಬಾಳುವ ಮನೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಪ್ರತಿಭಾವಂತ ಕಲಾವಿದರಿಗೆ ನೆರವಾಗುತ್ತಿದ್ದರು. ಕೇರಳ ಪ್ರವಾಹದ ಸಮಯದಲ್ಲೂ ಇವರು ನೀಡಿದ ಧನಸಹಾಯ ಮತ್ತು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿದ್ದ ಕಾರ್ಯಗಳು ಇವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದ್ದವು.

ಸದ್ಯ ದುಬೈನಲ್ಲಿರುವ ರಾಯ್ ಅವರ ಪತ್ನಿ ಲಿನಿ ರಾಯ್ ಹಾಗೂ ಮಕ್ಕಳು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ಉದ್ಯಮ ಲೋಕದ ಈ ಧ್ರುವತಾರೆಯ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Related Articles

Latest Articles