
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ಬೈಕ್ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ವೇಣೂರು ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.


ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20ರಂದು ನಸುಕಿನ ವೇಳೆ ಬೈಕ್ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಹಿಡಿದು, ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ನಗರದ ಕುಳೂರು ನಿವಾಸಿಗಳಾದ ಮೊಯಿದ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರು ಜ.20ರಂದು ನಸುಕಿನ ಜಾವ 2:10ರ ಸುಮಾರಿಗೆ ಮರೋಡಿ ಗ್ರಾಮದ ದೇವಿಪ್ರಸಾದ್ ಎಂಬವರ ಮನೆಯ ಬಳಿ ಇದ್ದ ಬೈಕ್ (KA-19-W-407) ಕಳವು ಮಾಡಲು ಯತ್ನಿಸಿದ್ದಾರೆ. ಈ ವೇಳೆ ನಾಯಿಗಳು ಬೊಗಳುತ್ತಿರುವುದನ್ನು ಗಮನಿಸಿದ ನೆರೆಮನೆಯವರು ಕೂಡಲೇ ಮಾಲೀಕರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ದೇವಿಪ್ರಸಾದ್ ಮತ್ತು ತಂಡವು ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು ಸುಮಾರು 25-30 ಜನರ ಗುಂಪು ಮರಕ್ಕೆ ಕಟ್ಟಿ ಹಾಕಿತ್ತು.
ಪರಸ್ಪರ ದೂರು ದಾಖಲು: ಕಳ್ಳತನದ ದೂರು: ದೇವಿಪ್ರಸಾದ್ ಅವರು ನೀಡಿದ ದೂರಿನಂತೆ, ಬೈಕ್ ಕಳ್ಳತನಕ್ಕೆ ಯತ್ನಿಸಿ ಹಲ್ಲೆ ನಡೆಸಿದ ಆರೋಪಿಗಳಾದ ಅಬ್ದುಲ್ ಸಮದ್ ಮತ್ತು ಮೊಯಿದ್ದಿನ್ ನಾಸಿರ್ ವಿರುದ್ಧ BNS-2023 ಸೆಕ್ಷನ್ 303(2), 307 ರಡಿ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಲ್ಲೆಯ ದೂರು: ಹಲ್ಲೆಗೊಳಗಾದ ಅಬ್ದುಲ್ ಸಮದ್ ಎಂಬವರು ಮತ್ತೊಂದು ದೂರು ನೀಡಿದ್ದು, ತಾವು ಸಂಬಂಧಿಕರ ಮನೆ ಹುಡುಕುತ್ತಾ ದಾರಿ ತಪ್ಪಿದ್ದೆವು. ಈ ವೇಳೆ ಸುಳ್ಳು ಆರೋಪ ಹೊರಿಸಿ 25-30 ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರಕ್ಕೆ ಕಟ್ಟಿ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನಂತೆ ಸ್ಥಳೀಯರಾದ ಬಾಚು, ನಿತಿನ್, ನರೇಶ್ ಅಂಚನ್ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ವೇಣೂರು ಪೊಲೀಸರು ಎರಡೂ ಪ್ರಕರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
-
Slug:
bike-theft-attempt-marodi-belthangady-accused-thrashed-by-public -
Title: ಮರೋಡಿಯಲ್ಲಿ
