ನಮ್ಮ ಕಡಬಕ್ಕೆ ಹೆಮ್ಮೆ: ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದ ಯೇನೆಕಲ್ಲಿನ ಹಿರಿಯ ಕ್ರೀಡಾಪಟು

kadaba times

ಯೇನೆಕಲ್ಲು ಗ್ರಾಮದ ರಾಮಯ್ಯ ಮಾದನಮನೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಇವರು ಈ ಹಿಂದೆ 7 ಬಾರಿ ರಾಷ್ಟ ಮಟ್ಟದಲ್ಲಿ ಮತ್ತು ಒಂದು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದಾರೆ.

kadaba times
uniq

ಕಡಬ ಟೈಮ್ಸ್,ಪ್ರಮುಖ ಸುದ್ದಿ:   65+ ವಯೋಮಾನದ ಹಿರಿಯರ ಕ್ರೀಡಾಕೂಟದಲ್ಲಿ 200 ಮೀ., 400 ಮೀ. ಮತ್ತು 800 ಮೀ. ಓಟದಲ್ಲಿ ಯೇನೆಕಲ್ಲು ಗ್ರಾಮದ ರಾಮಯ್ಯ ಮಾದನಮನೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಹಿರಿಯರ ಕ್ರೀಡಾಕೂಟ ಆಯೋಜನೆಯಾಗಿತ್ತು. ಇವರು ಈ ಹಿಂದೆ 7 ಬಾರಿ ರಾಷ್ಟ ಮಟ್ಟದಲ್ಲಿ ಮತ್ತು ಒಂದು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದಾರೆ.

kadaba times
kadaba times

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾಗಿ, ಯೇನೆಕಲ್ಲು ಸ.ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ, ಯೇನೆಕಲ್ಲಿನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಉಳ್ಳಾಕುಲು ಉಳ್ಳಾಳ್ತಿ, ಶ್ರೀ ಬಚ್ಚನಾಯಕ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ  ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

 

Related Articles

Latest Articles