ಕಡಬ: ನಾಲ್ವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ನೀಡಿದ ಕುಂಬಾರ ಯುವ ವೇದಿಕೆ

kadaba times

ಕಡಬ: ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಯೂತ್ ಕ್ಲಬ್ ದೊಡ್ಡ ಕೊಪ್ಪ (ಕುಂಬಾರ ಯುವ ವೇದಿಕೆ) ಇದರ 8 ನೇ ವರ್ಷದ ವಾರ್ಷಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಡಿ.20 ರಂದು ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾ ಭವನದಲ್ಲಿ ನಡೆಯಿತು.

kadaba times
uniq

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ  ಮೋಹನ್ ದಾಸ್ ಬಾಲ್ಕಾಡಿ  ಮಾತನಾಡಿ, ಸಮುದಾಯದ ಸಂಘಟನೆಯು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರವಾಗಿದೆ,ಹಿರಿಯರ ಮಾರ್ಗದರ್ಶನದೊಂದಿಗೆ ಯುವ ಸಮೂಹ ಸೇರಿಕೊಂಡು ಸಮಾಜದ ಮತ್ತು ಸಮುದಾಯದ ಏಳಿಗೆಗೆ ಶ್ರಮಿಸುವಂತಾಗಲಿ ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಾಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಮಾತನಾಡಿ, ಸಹಾಯಧನ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಂಘಟನೆಯು ಮಾದರಿಯಾಗಿ ಬೆಳೆಯುತ್ತಿದೆ, ಈ ಸಂಘಟನೆಯ ಬಲವರ್ಧನೆಗೆ ಸಮಾಜದ ಎಲ್ಲರೂ ಕೈಜೋಡಿಸಬೇಕೆಂದರು.

ಸನ್ಮಾನ: ಉತ್ತಮ ಸಾಧನೆಗೈದ ಸಮುದಾಯದ ಹೇಮಂತ್ , ದೊಡ್ಡ ಕೊಪ್ಪದಲ್ಲಿ ಪಾರಂಪರಿಕವಾಗಿ ದೈವ ನರ್ತನ ಸೇವೆ ಮಾಡುತ್ತಿರುವ ಧರುಣ್ ಮತ್ತು ರಮೇಶ್ ಕೆ, ದೊಡ್ಡ ಕೊಪ್ಪ ಶ್ರೀ ಇಷ್ಟದೇವತೆ ಮತ್ತು ರಾಜನ್ ಧೈವ ಸಪರಿವಾರ ದೈವಗಳ ದೈವಸ್ಥಾನ ಬದಿಗುಂಡ ಮಾಡ ಇದರ ಪ್ರಧಾನ ಅರ್ಚಕ ಚೆನ್ನಪ್ಪ ಕುಂಬಾರ , ಯೂತ್ ಕ್ಲಬ್ ನ ಹಿರಿಯ ಸದಸ್ಯ ರಮೇಶ್ ಪೂಜಾರಿ ಮನೆ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

kadaba times
kadaba times

ಸಹಾಯಧನ ವಿತರಣೆ:ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವ ಭಾಗವಾಗಿ ಸಂಘಟನೆಯ ಮಹತ್ವದ ನಿರ್ಣಯದಂತೆ 4 ಮಂದಿ ವಿದ್ಯಾರ್ಥಿಗಳಿಗೆ ಪೋತ್ಸಾಹ ಸಹಾಯಧನ ನೀಡಲಾಯಿತು.

ಸಂಘಟನೆಯ ಉಪಾಧ್ಯಕ್ಷ ಬಾಲಚಂದ್ರ ಕೆ ಸ್ವಾಗತಿಸಿದರು, ಸದಸ್ಯ ಪ್ರಕಾಶ್ ವಂದಿಸಿದರು. ಕಾರ್ಯದರ್ಶಿ ಸಂತೋಷ್ ಪಟ್ನ ವಾರ್ಷಿಕ ವರದಿ ಮಂಡನೆ ಜೊತೆಗೆ ನಿರೂಪಣೆ ಮಾಡಿದರು.ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಬಲೇ ತೆಲಿಪಾಲೆ ಕಲಾವಿದ ಸಾಯಿ ಪ್ರಸಾದ್ ಪುತ್ತೂರು ಇವರ ನೇತೃತ್ವದ ಮಕ್ಕರ್ ತಂಡದಿಂದ ತುಳು ಹಾಸ್ಯಮಯ ರಸಮಂಜರಿ ನಡೆಯಿತು.

Related Articles

Latest Articles