ಕಡಬ ಪತ್ರಕರ್ತರ ಸಂಘದಲ್ಲಿ ಭಿನ್ನಮತದ ಸ್ಫೋಟ: ‘ಅವಿರೋಧ’ ಆಯ್ಕೆಯ ಹಿಂದಿದೆ ಅಸಮಾಧಾನದ ಬೇಗುದಿ!

kadaba times

2016 ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಾಗ ಬಾಲಕೃಷ್ಣ ಕೊಯಿಲ ಅವರು ಸ್ಥಾಪಕ ಅಧ್ಯಕ್ಷರಾಗಿ  5 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ ನಾಗರಾಜ್ ಎನ್.ಕೆ. ಅವರು 2025 ರ ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಂಘವನ್ನು ಶಿಸ್ತುಬದ್ದ ಮತ್ತು ಮಾದರಿಯಾಗಿ ರೂಪಿಸಿದ ಕೀರ್ತಿ ಇವರಿಬ್ಬರಿಗೂ  ಸಲ್ಲುತ್ತದೆ. ಸಂಘದ ಮೂಲಕ ಹಲವು ಜನಪಯೋಗಿ ಕಾರ್ಯಕ್ರಮ, ಶಿಬಿರ, ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮಗಳ ಮೂಲಕ ರಾಜ್ಯ ಮಟ್ಟದಲ್ಲಿ ಸಂಘಕ್ಕೆ ಹೆಸರು ತಂದಿದ್ದಾರೆ. ಆದರೂ  ಇದೀಗ ಸಂಘವು ಮತ್ತೆ ಹಳೆಯ ನಾಯಕತ್ವದ ಕಡೆಗೆ ಮುಖ ಮಾಡಿರುದಕ್ಕಷ್ಟೇ ಅಸಮಾಧಾನ . ಭಿನ್ನ ಮತ  ಶಮನಗೊಂಡು ಸಂಘ ಹೇಗೆ ಮುನ್ನಡೆಯಲಿದೆ ಎಂಬುದು ಕಾದುನೋಡಬೇಕಿದೆ.

kadaba times
uniq

ಕಡಬ: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025–28ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ತೀವ್ರ ಸ್ವರೂಪದ ಭಿನ್ನಮತ ಮತ್ತು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಡಿಸೆಂಬರ್ 24ರಂದು ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದ್ದರೂ, ಸಂಘದ ಸದಸ್ಯರೊಳಗೆ ಅತೃಪ್ತಿಯ ಜ್ವಾಲೆ ಹೊತ್ತಿ ಉರಿಯುತ್ತಿದೆ.

ಹೊಸ ಮುಖಗಳಿಗೆ ಕಹಿಯಾದ ‘ಅವಿರೋಧ’ ಆಯ್ಕೆ

ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆಯ ಮೂಲಕ ಆಯ್ಕೆಗೆ ಜಿಲ್ಲಾ ಸಂಘ ಅವಕಾಶ ಕಲ್ಪಿಸಿತ್ತು. ಇದರಿಂದಾಗಿ ಹೊಸಬರಿಗೆ ಮತ್ತು ಯುವ ಪತ್ರಕರ್ತರಿಗೆ ನಾಯಕತ್ವದ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಹಿರಿಯರು ಮೇಲುಗೈ ಸಾಧಿಸಿರುವುದು ಕಿರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಆಯ್ಕೆಯಾದ ಪದಾಧಿಕಾರಿಗಳು:

  • ಅಧ್ಯಕ್ಷರು: ಬಾಲಕೃಷ್ಣ ಕೆ.ಎಸ್. (ಸ್ಥಾಪಕ ಅಧ್ಯಕ್ಷರು)

  • ಉಪಾಧ್ಯಕ್ಷರು: ಲೋಕೇಶ್ ಬಿ.ಎನ್.

  • ಪ್ರಧಾನ ಕಾರ್ಯದರ್ಶಿ: ಪ್ರವೀಣ್ ಕುಮಾರ್

  • ಕಾರ್ಯದರ್ಶಿ: ಸುಧಾಕರ ಆಚಾರ್ಯ

    kadaba times
    kadaba times
  • ಕೋಶಾಧಿಕಾರಿ: ಪ್ರವೀಣ್ ರಾಜ್ ಕೊಯಿಲ

  • ಕಾರ್ಯಕಾರಿ ಸಮಿತಿ: ವಿಜಯಕುಮಾರ್, ರತ್ನಾಕರ, ಹರೀಶ್ ಬಿ., ನಾಗರಾಜ್ ಎನ್. ಕೆ., ಸ್ವಾತಿ ಕೆ.ವಿ.

ಯುವ ಪತ್ರಕರ್ತರ ಕಡೆಗಣನೆ: ಬದಲಾದ ರಾಜಕೀಯ ಲೆಕ್ಕಾಚಾರ

ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಕೊಯಿಲ, ವಿಜಯ ಕುಮಾರ್, ತಸ್ಲೀಂ ಮರ್ದಾಳ  ಪ್ರಬಲ ಆಕಾಂಕ್ಷಿಗಳಾಗಿದ್ದರು.   ವಿಜಯಕುಮಾರ್ ಅವರಿಗೆ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನದ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೂ ನಾಮಪತ್ರ ಸಲ್ಲಿಸದೆ, ಕೇವಲ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸೀಮಿತವಾಗಬೇಕಾಯಿತು. ಇದು ಸಂಘದೊಳಗಿನ ಆಂತರಿಕ ಒತ್ತಡಕ್ಕೆ ಸಾಕ್ಷಿಯಾಗಿದೆ.

ಸ್ಥಾಪಕ ಅಧ್ಯಕ್ಷರ ನಡೆಗೆ ಸದಸ್ಯರ ಅಪಸ್ವರ?:

ಈ ಹಿಂದಿನ ಸಭೆಯಲ್ಲಿ ನಿರ್ಗಮನದ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರನ್ನೇ ಮುಂದುವರಿಸಲು ನಿರ್ಧರಿಸುವ ಮೂಲಕ ಅಸಮಾಧಾನ ಶಮನಕ್ಕೆ ಯತ್ನಿಸಲಾಗಿತ್ತು. ಆದರೆ ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ನಿರ್ಗಮನದ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರು, ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದರು ಎಂದು ಹೇಳಲಾಗುತ್ತಿದೆ.   ಸದಸ್ಯರ ಅಭಿಯ ಸಂಗ್ರಹಿಸದೆ ಏಕಪಕ್ಷೀಯವಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದಾಗಿ ಪತ್ರಕರ್ತರ ಸಮುಹದಿಂದ ಕೇಪ್ರಾಳಿ ಬಂದ ಸ್ವರವಾಗಿದೆ.  ಅಲ್ಲದೆ  ಸದಸ್ಯರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಯುವ ಪತ್ರಕರ್ತನ ಭಾವನಾತ್ಮಕ ಸಂದೇಶ ಹಾಗೂ ರಾಜೀನಾಮೆ ನಿರ್ಧಾರ

ಸಂಘದ ಗ್ರೂಪ್‌ನಲ್ಲಿ ಯುವ ಪತ್ರಕರ್ತರೊಬ್ಬರು ಹಾಕಿದ ಸಂದೇಶವು ಸಂಘದೊಳಗಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ. “ಯಾವುದೇ ಹುದ್ದೆ ಶಾಶ್ವತವಲ್ಲ, ಹೊಸ ಮುಖಗಳಿಗೆ ಅರ್ಹತೆ ಸಾಬೀತುಪಡಿಸಲು ಹಿರಿಯರು ಅವಕಾಶ ನೀಡುತ್ತಿಲ್ಲ. ಹಿರಿಯರ ಮೇಲುಗೈಯಿಂದಾಗಿ ನಾನು ಕಾರ್ಯಕಾರಿ ಸಮಿತಿಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ” ಎಂಬ ಅವರ ಮಾತುಗಳು ಪತ್ರಕರ್ತರ ವಲಯದಲ್ಲಿ ಸಂಚಲನ ಮೂಡಿಸಿದೆ.

ಏಕಪಕ್ಷೀಯ ನಿರ್ಧಾರ?

ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಕರ್ತರ ಸಂಘವೇ ಇಂದು ಹಿರಿಯ-ಕಿರಿಯ ಎಂಬ ಭೇದಭಾವದಿಂದಾಗಿ ವಿಘಟನೆಯ ಹಂತ ತಲುಪಿದೆಯೆ ಎಂಬ ಸಂಶಯಕ್ಕೆ ಈ ಬೆಳವಣಿಗೆಗಳು ಮತ್ತುಷ್ಟು ಪುಷ್ಟಿ ನೀಡಿವೆ . ಸಮನ್ವಯದ ಕೊರತೆ ಮತ್ತು ಏಕಪಕ್ಷೀಯ ನಿರ್ಧಾರಗಳು ಹೀಗೆಯೇ ಮುಂದುವರಿದರೆ ಸಂಘವು ಇಬ್ಬಾಗವಾಗುವುದು ಖಂಡಿತ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಅಸಮಾಧಾನದ ಈ ಬೇಗುದಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.

Related Articles

Latest Articles