ಪಂಜದ ಬಳ್ಪ ಬಳಿ ಬೈಕ್ ಗೆ ಅಡ್ಡ ಬಂದ ಕಾಡು ಪ್ರಾಣಿ: ಸುಬ್ರಹ್ಮಣ್ಯಕ್ಕೆ ಪೂಜೆಗೆ ಹೋಗುತ್ತಿದ್ದ ಅರ್ಚಕ ಗಂಭೀರ

kadaba times

ಕುಕ್ಕೆ ಸುಬ್ರಹ್ಮಣ್ಯ : ಅರ್ಚಕರೊಬ್ಬರ  ವಾಹನಕ್ಕೆ ಕಾಡುಪ್ರಾಣಿಯೊಂದು ಢಿಕ್ಕಿ ಹೊಡೆದ ಕಾರಣ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಡಿ.12 ರ ಮುಂಜಾನೆ ನಡೆದಿದೆ.

kadaba times
uniq

ಬೆಳ್ಳಂಬೆಳಗ್ಗೆ ಪೂಜೆ ನೆರವೇರಿಸಲು  ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪಂಜ ಗ್ರಾಮದ ವಾಸು ಭಟ್ ಎಂದು ಗುರುತಿಸಲಾಗಿದೆ.

ರಾಜ್ಯ ಹೆದ್ದಾರಿಯ ಬಳ್ಪ ಸಮೀಪದ ಎಡೋಣಿ ಬೆಳಗಿನ ಸುಮಾರು ನಾಲ್ಕುರಿಂದ ಐದು ಗಂಟೆಯ ವೇಳೆ ಪಂಜದ ತನ್ನ ಮನೆಯಿಂದ  ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.

kadaba times
kadaba times

ಕಡವೆಯಂತಿರುವ ಕಾಡು ಪ್ರಾಣಿ ಢಿಕ್ಕಿ ಹೊಡೆದಿರುವುದು ಮೆಲ್ನೋಟಕ್ಕೆ ಕಂಡು ಬಂದಿದ್ದು,  ಅಪಘಾತ ಸ್ಥಳದಲ್ಲಿ ಪ್ರಾಣಿಯ ರೋಮದಂತಿರುವ   ಕುರುಹುಗಳ ಕಂಡು ಬಂದಿದೆ.

ಅಪಘಾತದಲ್ಲಿ  ಗಂಭೀರವಾಗಿ  ಗಾಯಗೊಂಡ  ಗಾಯಾಳುವನ್ನು   ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ ಬಳಿಕ   ಹೆಚ್ಚಿನ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು  ತಿಳಿದು ಬಂದಿದೆ.

Related Articles

Latest Articles