
ಕಡಬ: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.


ನ.8 ರಂದು ಮಂಗಳೂರಿನ ಕಸಬಾ ಬೆಂಗ್ರೆಯ ಮಹಮ್ಮದ್ ಮುನಾವರ್ ಎಂಬಾತನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.ಬಳಿಕ ಆರೋಪಿಯನ್ನು ನ.9 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ನ್ಯಾಯಾಲಯವು ಆರೋಪಿಗೆ14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಮಾಜಿಕ ಜಾಲತಾಣವಾದ Instagram ನ target_boy900 ಎಂಬ Instagram ಖಾತೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಶದ ಹಿನ್ನೆಲೆಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ, ಪ್ರತೀಕಾರಕ್ಕೆ ಪ್ರಚೋದಿಸುವಂತಹ ಸಂದೇಶವನ್ನು ಪ್ರಸಾರ ಮಾಡಲಾಗಿತ್ತು.


ಈ ಬಗ್ಗೆ ದಿನಾಂಕ: 02.06.2025 ರಂದು ಕಡಬ ಪೊಲೀಸ್ ಠಾಣಾ ಅಕ್ರ: 40/2025 ಕಲಂ: 55,353(2) r/w 103 BNS-2023 ರಂತೆ ಪ್ರಕರಣ ದಾಖಲಾಗಿತ್ತು.
