
ಕುಕ್ಕೆ ಸುಬ್ರಹ್ಮಣ್ಯ: ವ್ಯಕ್ತಿಯೋರ್ವರು ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ಸಂದರ್ಭ ಮರದಲ್ಲೇ ಮೃತ ಪಟ್ಟ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದಿಂದ ಸೊಮವಾರ (ನ.24) ಸಂಜೆ ನಡೆದಿದೆ.


ಕೊಲ್ಲಮೊಗ್ರು ಬಳಿಯ ಪನ್ನೆಯ ವ್ಯಕ್ತಿಯೋರ್ವರ ಜಾಗದ ತೆಂಗಿನ ಮರದಿಂದ ಕೇರಳ ಮೂಲದ ವ್ಯಕ್ತಿಯೊಬ್ಬರು ಶೇಂದಿ ಮೂರ್ತೆ ನಡೆಸುತ್ತಿದ್ದರು. ಎಂದಿನಂತೆ ಸೋಮವಾರ ಕೂಡಾ ಶೇಂದಿ ಇಳಿಸಲು ಮರ ಹತ್ತಿದ್ದ ಅವರು ಅಲ್ಲೇ ಅಸ್ವಸ್ಥಗೊಂಡು ಬೊಬ್ಬೆ ಹಾಕಿದರೆನ್ನಲಾಗಿದೆ.
ಇದನ್ನು ಕೇಳಿಸಿಕೊಂಡ ಸ್ಥಳೀಯ ರೋರ್ವರು ಗಮನಿಸಿ ಮರ ಹತ್ತಿದಾಗ ಅವರು ಅವರು ಉಸಿರಾಡುತ್ತಿದ್ದರೆನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳದವರು ಬಂದ ಮೇಲೆ ಸ್ಥಳೀಯರೋರ್ವರು ಮರ ಹತ್ತಿ ನೋಡಿದಾಗ ಅವರು ಮೃತ ಪಟ್ಟಿದ್ದರೆನ್ನಲಾಗಿದೆ.


ಸ್ಥಳೀಯರ ಸಹಕಾರದಿಂದ ಮೃತ ದೇಹವನ್ನು ಕೆಳಗಿಳಿಸಲಾಯಿತೆಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಲಭಿಸಿಲ್ಲ.
