ಕಡಬ:ಹಸಿಮೀನು ಮಾರಾಟ ಹಕ್ಕಿನ ಹರಾಜಿನಿಂದ ಅಧಿಕ ಆದಾಯ ಸಿಕ್ಕಿದರೂ ಮೂಲ ಸೌಕರ್ಯಗಳ ಸ್ಥಿತಿ ಶೋಚನೀಯ

kadaba times

ಕಡಬ: ವರ್ಷದ ಬಳಿಕ  ಕಡಬ ಸಂತೆಕಟ್ಟೆಯಲ್ಲಿರುವ ಕಡಬ ಪಟ್ಟಣ ಪಂಚಾಯತ್‌ನ ಹಸಿಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಿಗಳ ಪೈಪೋಟಿಯ ಕಾರಣದಿಂದಾಗಿ ಮೀನಿನ ದರ ಇಳಿಕೆಯಾಗಿದೆ. ಈ ಹಿಂದೆ ಸ್ಟಾಲ್ ನಲ್ಲಿ ಹೇಳಿದ್ದೆ ದರ, ಕೊಟ್ಟದ್ದೇ ಮೀನು ಪೂರ್ಣ ಕಡಿವಾಣ ಬಿದ್ದಂತಾಗಿದೆ.

kadaba times
uniq

ಮೀನು ಮಾರುಕಟ್ಟೆಯಲ್ಲಿನ ಮಾರಾಟ ಹಕ್ಕು ವಾರ್ಷಿಕವಾಗಿ ಲಕ್ಷಾಂತರ ರೂ. ಗಳಿಗೆ ಹರಾಜಾಗುತ್ತದೆ. ಈಗಾಗಲೇ 2 ಸ್ಟಾಲ್‌ಗ‌ಳು ಹರಾಜಾಗಿರುವ ಮೊತ್ತ 16 ಲಕ್ಷ ರೂ.ಗಳನ್ನು ದಾಟಿದೆ. ಬಾಕಿ ಉಳಿದಿರುವ ಇನ್ನೊಂದು ಸ್ಟಾಲ್‌ನ ಆರಂಭಿಕ ಬಿಡ್ಡು ಕೂಡ 5 ಲಕ್ಷ ರೂ. ನಿಗದಿಯಾಗಿದೆ.  ಸ್ಥಳೀಯಾಡಳಿತಕ್ಕೆ ಹಸಿಮೀನು ಮಾರಾಟದ ಹಕ್ಕಿನ ಹರಾಜಿನಿಂದ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿದರೂ ಅಲ್ಲಿನ ಮೂಲ ಸೌಕರ್ಯಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ.

ಮಾರುಕಟ್ಟೆಯ ಸಿಮೆಂಟ್‌ ಶೀಟಿನ ಛಾವಣಿ ಒಡೆದು ಮಳೆಗಾಲದಲ್ಲಿ ಮಳೆ ನೀರೆಲ್ಲ ಸ್ಟಾಲ್‌ನೊಳಗೆ ಸೋರುತ್ತಿದೆ. ಮಾರುಕಟ್ಟೆಯ ಆವರಣದೊಳಗಿನ ಅಂಗಳಕ್ಕೆ ಹಾಕಿರುವ ಇಂಟರ್‌ಲಾಕ್‌ಗಳು ಅಲ್ಲಲ್ಲಿ ಎದ್ದುಹೋಗಿ ಕೊಳಚೆ ನೀರು ಸಂಗ್ರಹ ವಾಗುತ್ತಿದೆ. ಶೌಚಾಲಯಕ್ಕೆ ಬೀಗ ಬಿದ್ದು ವರ್ಷ ಗಳೇ ಕಳೆದಿವೆ. ಪಟ್ಟಣ ಪಂಚಾಯತ್‌ನಲ್ಲಿ ಹೊಸದಾಗಿ ಜನಪ್ರತಿನಿಧಿಗಳ ಆಡಳಿತ ಮಂಡಳಿ ಕಾರ್ಯಾರಂಭಿಸಿದ್ದು, ಹಸಿಮೀನು ಮಾರುಕಟ್ಟೆಗೆ ಕಾಯಕಲ್ಪ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

kadaba times
kadaba times

ಕಡಬ ಪಟ್ಟಣ ಪಂಚಾಯತ್‌ನ ಹಸಿಮೀನು ಮಾರುಕಟ್ಟೆಯಲ್ಲಿ ಮೂರು ಸ್ಟಾಲ್‌ಗ‌ಳಿವೆ. ಕಳೆದ ಕೆಲವು ತಿಂಗಳಿನಿಂದ ಮೀನು ವ್ಯಾಪಾರಿ ಫಯಾಝ್ ಅವರ ಮಾಲಕತ್ವದ ಒಂದು ಸ್ಟಾಲ್‌ನಲ್ಲಿ ಮಾತ್ರ ಮೀನು ಮಾರಾಟ ನಡೆಯುತ್ತಿತ್ತು. ವಾರದ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇನ್ನೊಂದು ಸ್ಟಾಲನ್ನು ಪಡೆದ ವ್ಯಾಪಾರಿ ಕೆ.ಎಂ.ಮ್ಯಾಥ್ಯೂ (ರಾಜು) ವ್ಯಾಪಾರ ಆರಂಭಿಸಿದರು.

ಈಗ ಇಬ್ಬರು ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಜನರನ್ನು ಸೆಳೆಯುವುದಕ್ಕಾಗಿ ಗ್ರಾಹಕರನ್ನು ಕೂಗಿ ಕರೆಯುವ ವೇಳೆ ದರ ಇಳಿಕೆ, ಕೊಡುಗೆಗಳ ಆಫರ್‌ ಜೋರಾಗಿದೆ. ಇನ್ನು ಪ್ರತಿ ಸ್ಟಾಲ್ ಗಳ ಮುಂಭಾಗ ಪ್ರತಿ ದಿನದ ಮೀನಿನ ದರ ಕಾಣುವಂತೆ ಬೋರ್ಡ್/ಫಲಕ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ಇದರಿಂದ ಯಾವ ಯಾವ ಸ್ಟಾಲ್ ನಲ್ಲಿ ಎಷ್ಟೆಷ್ಟು ದರ ವ್ಯತ್ಯಾಸಗಳಿವೆ ಎಂಬುದು ಗೊತ್ತಾಗಲಿದೆ

Related Articles

Latest Articles