
ಕಡಬ: ಇಲ್ಲಿನ ಮರ್ದಾಳ ಸಮೀಪದ ಐತ್ತೂರು ಗ್ರಾಮದ ಮೂಜೂರು ಮೀಸಲು ಅರಣ್ಯ ವ್ಯಾಪ್ತಿಯ ಬಜಕರೆ ಸಿ ಆರ್ ಸಿ ಕಾಲನಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಮರಿಯಾನೆ ಜೊತೆಗೆ ಎರಡು ಕಾಡಾನೆಗಳು ಕೆಲ ವಾರಗಳಿಂದ ಬೀಡು ಬಿಟ್ಟಿದ್ದು ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಈ ಬಗ್ಗೆ ಕಡಬ ಟೈಮ್ಸ್ ವರದಿ ಪ್ರಕಟಿಸಿತ್ತು.


ಅಲ್ಲಿನ ಜನರು ಅರಣ್ಯಾಧಿಕಾರಿಗಳ ಸೂಕ್ತ ಸ್ಪಂದನೆ ಇಲ್ಲ, ಈ ಹಿಂದೆ ಕಡಬ ಮರ್ದಾಳದಲ್ಲಿ ಕಾಡಾನೆಗೆ ಯುವತಿ ಮತ್ತು ವ್ಯಕ್ತಿಯೊಬ್ಬರು ಬಲಿಯಾಗಿದ್ದು ಇಂತಹ ಘಟನೆ ಮತ್ತೆ ನಡೆಯಂತೆ ಇಲಾಖೆ ಎಚ್ಚೆತ್ತು ಕೊಳ್ಳಬೇಕು , ಕಾಡಾನೆಗಳನ್ನು ಸ್ಥಳಾಂತರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದರು.

ಯಾವುದೇ ಬೆಳವಣಿಗೆ ಕಾಣದ ಹಿನ್ನೆಲೆ ಗ್ರಾಮಸ್ಥರು ನ.21 ರಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರ ಕಚೇರಿ ಎದುರು ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಿದ್ದರು. ಅದರಂತೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರಿಗೆ ,ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ, ಕಡಬ ತಹಶೀಲ್ದಾರರಿಗೆ ಮನವಿ ನೀಡಲಾಗಿತ್ತು.


ಇದೀಗ ಅರಣ್ಯಾಧಿಕಾರಿಗಳು ಎಚ್ಚೆತ್ತು ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಂಶಾತ್ ಪೈ, ವ್ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ , ಉಪ ವಲಯ ಅರಣ್ಯಾಧಿಕಾರಿ ಯೋಗಿಶ್ ಕುಮಾರ್ ಬಜಕೆರೆ ಕಾಲೋನಿ ಗೆ ಭೇಟಿ ಕಾಡಾನೆಗಳಿಂದ ತೊಂದರೆಗಳ ಬಗ್ಗೆ ಅಲ್ಲಿನ ನಿವಾಸಿಗಳ ಜೊತೆ ಚರ್ಚಿಸಿದ್ದಾರೆ.
ಇನ್ನೂ 2 ದಿನದಲ್ಲಿ ಈ ಭಾಗದಿಂದಲೆ ಕಾಡಾನೆಗಳನ್ನು ಓಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅವರ ಮನವಿಗೆ ಬೆಲೆಕೊಟ್ಟು ಇನ್ನು 2 ದಿನದಲ್ಲಿ ಅರಣ್ಯ ಇಲಾಖೆ ಸ್ಪಂದಿಸದಿದ್ದಲ್ಲಿ ಸೋಮವಾರ ಮತ್ತೆ ಪ್ರತಿಭಟನೆ ಮಾಡುವುದಾಗಿ ತೀರ್ಮಾನಿ ಸಲಾಗಿದೆ ಎಂದು ಪ್ರತಿಭಟನೆ ನೇತೃತ್ವವಹಿಸಿರುವ ಮಾಜಿ ಗ್ರಾ.ಪಂ ಅಧ್ಯಕ್ಷ ಸತೀಶ್ ಐತ್ತೂರು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳ ಭೇಟಿ ವೇಳೆ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವತ್ಸಲಾ, ಅಂಗನವಾಡಿ ಕಾರ್ಯಕರ್ತೆ ಲಿಂಗಮ್ಮ, ಆಜನ, ಕಲ್ಲಾಜೆ ಪರಿಸರದ ನಿವಾಸಿಗಳು ಪಾಲ್ಗೊಂಡಿದ್ದರು.
