ಮರ್ದಾಳ ಬಳಿ ದನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚರಂಡಿಗೆ ಉರುಳಿದ ಕಾರು

kadaba times

ಕಡಬ ಟೈಮ್ಸ್, ಮರ್ದಾಳ:  ಅಡ್ಡಲಾಗಿ ಬಂದ ದನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಪಕ್ಕದ ಚರಂಡಿಗೆ ಬಿದ್ದ ಘಟನೆ ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯ  ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿ ನ.2ರಂದು ಬೆಳಿಗ್ಗೆ ನಡೆದಿದೆ.

kadaba times
kadaba times
kadaba times
uniq
ಘಟನೆಯಲ್ಲಿ ಕಾರಿನಲ್ಲಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳಾದ ಶ್ರೀಮತಿ ಬೇಬಿ(38ವ.), ಅವರ ಪತ್ತೆ ಸಾವಿತ್ರಮ್ಮ(80ವ.), ಮಕ್ಕಳಾದ ಅನು(14ವ.) ಹಾಗೂ ಮಂಜಣ್ಣ ಗೌಡ(12ವ.)ಎಂಬವರು ಗಾಯಗೊಂಡಿದ್ದು ಇವರೆಲ್ಲರೂ ಕಡಬ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಗ್ಲಾಸ್ ಲೈಫ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀಮತಿ ಬೇಬಿ ಅವರ ಪತಿ ಸ್ವಾಮಿ ಹಾಗೂ ಇತರರು ನ.1ರಂದು  ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದು ನ.2ರಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆಂದು ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಕಾರಿಗೆ ಅಡ್ಡಲಾಗಿ ದನವೊಂದು ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಕಾರು ಚಾಲಕ ಸ್ವಾಮಿ ಅವರ ನಿಯಂತ್ರಣ ಕಳೆದುಕೊಂಡು ಪಕ್ಕದ ಚರಂಡಿಗೆ ಬಿದ್ದಿದೆ
 ಈ ಬಗ್ಗೆ ಬೇಬಿ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles