ಕಡಬ ಪೇಟೆಯಲ್ಲಿ ಕಾರು-ಆಟೋ ನಡುವೆ ಅಪಘಾತ:ಇಬ್ಬರು ಆಸ್ಪತ್ರೆಗೆ ದಾಖಲು

kadaba times

ಕಡಬ: ಇಲ್ಲಿನ ಅನುಗ್ರಹ ಸಭಾ ಭವನದ ಬಳಿ ಕಾರು ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನ.5  ರ ಸಂಜೆ ನಡೆದಿದೆ.

kadaba times
uniq

ಅಪಘಾತದಲ್ಲಿ ಆಟೋ ಚಾಲಕ ಆದಂ ಮತ್ತು ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಗಾಯಗೊಂಡು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯ ರಸ್ತೆಯಲ್ಲಿ ಕಳಾರ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾ ಕ್ಕೆ ಅನುಗ್ರಹ ಸಭಾ ಭವನದ ಬಳಿಯ ಗೂಡಂಗಡಿ ಸಮೀಪದಿಂದ  ಕಾರು ಏಕಾಏಕಿ  ಬಂದ ಹಿನ್ನೆಲೆ ಈ ಅಪಘಾತ ಸಂಭವಿಸಿರುವುದು ಸಿಸಿ ಟಿ ದೃಶ್ಯದಿಂದ ತಿಳಿದು ಬಂದಿದೆ.ಕೂಡಲೇ ಗೂಡಂಗಡಿ ಮಾಲಕ ಸಹಿತ ಕೆಲವರು ಆಗಮಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

kadaba times
kadaba times

ಅಪಘಾತದ ರಭಸಕ್ಕೆ ಆಟೋ ಮಗುಚಿ ಬಿದ್ದು ನಜ್ಜುಗುಜ್ಜಾಗಿದೆ.ಕಾರಿಗೂ ಹಾನಿಯಾಗಿದೆ. ಮುಖ್ಯ ರಸ್ತೆ ಬದಿಯಲ್ಲೇ ಕೆಲ ಅಂಗಡಿಗಳಿದ್ದು    ಸಮೀಪವೇ  ವಾಹನ ಪಾರ್ಕ್ ಮಾಡಲಾಗುತ್ತಿದೆ. ಇದರಿಂದಲೇ ಅಪಘಾತ ಸಂಭವಿಸಲು ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.   ಪ.ಪಂ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಇರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

Related Articles

Latest Articles