ಕಡಬ :ಮಲಗಿದ್ದ ವೇಳೆ ತಡ ರಾತ್ರಿ ಬಂದು ಮಹಿಳೆ ಜೊತೆ ಅಸಭ್ಯ ವರ್ತನೆ,ಜಾತಿ ನಿಂದನೆಗೈದ ಆರೋಪ

kadaba times

ಕಡಬ:ಮಹಿಳೆಯೊಬ್ಬರು ರಾತ್ರಿ ಮಲಗಿದ್ದ ವೇಳೆ ದಿಢೀರ್ ವ್ಯಕ್ತಿಯೊಬ್ಬ ಬಂದು ಅಸಭ್ಯವಾಗಿ ವರ್ತಿಸಿದಲ್ಲದೆ, ಜಾತಿ ನಿಂದನೆ ಗೈದ ಆರೋಪದಲ್ಲಿ  ಅಟ್ರಾಸಿಟಿ ಕಾಯ್ದೆಯಡಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಐತ್ತೂರು ಗ್ರಾಮದ ಉಮೇಶ್ ಗೌಡ  ಎಂಬಾತನ ವಿರುದ್ದ ಪ್ರಕರಣ ದಾಖಲಾಗಿರುವುದಾಗಿದೆ. ನ.13 ರ ಮದ್ಯರಾತ್ರಿ ಮನೆಪಕ್ಕದ ಕೋಣೆಯಲ್ಲಿ ಮಲಗಿದ್ದ ವೇಳೆ ಏಕಾಏಕಿ ಬಂದು  ಅಸಭ್ಯವಾಗಿ ವರ್ತಿಸಿದ್ದು ಸಹಾಯಕಾಗಿ ಬೊಬ್ಬೆ ಹೊಡೆದಿದ್ದಾರೆ. ಕೂಡಲೇ ಮನೆ ಮಂದಿ ಬಂದು ವ್ಯಕ್ತಿಯನ್ನು ಹಿಡಿದು ಕೊಂಡಿದ್ದು ಆಗ ಸ್ಥಳೀಯ ವ್ಯಕ್ತಿ  ಎಂದು ಗೊತ್ತಾಗಿದೆ.

ಮನೆ ಮಂದಿಗೆ ಹಲ್ಲೆಗೈದು ಜಾತಿ ನಿಂದನೆಗೈದು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಈತ ಈ ಹಿಂದೆ ಪೋಕ್ಸೋ ಪ್ರಕರಣದ ಆರೋಪಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯಿಂದ ದೂರು ಪಡೆದ ಪೊಲೀಸರು ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ  ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿರುವುದಾಗಿ ಮಾಹಿತಿ ಲಭಿಸಿದೆ.

kadaba times
kadaba times

ಆರೋಪಿಯನ್ನು ಕೂಡಲೇ ಬಂಧಿಸಿ:  ಪರಿಶಿಷ್ಟ ಸಮುದಾಯ ಮಹಿಳೆಗೆ ಆಗಿರುವ ಅವಮಾನ, ಅನುಚಿತ ವರ್ತನೆ ಯಾವುದೇ ಮಹಿಳೆಗೂ ಆಗಬಾರದು. ಸಮಾಜದಲ್ಲಿ ಇಂತಹ ಘಟನೆ ಆದಾಗ ಕೂಡಲೇ ಬಂಧಿಸಿ  ಕಾನೂನಿನ ಘನತೆ ಉಳಿಸಿಕೊಳ್ಳಬೇಕು. ಬಂಧಿಸದಿದ್ದಲ್ಲಿ ಮತ್ತೆ ಇಂತಹ ಕೃತ್ಯ ಪುನಾರವರ್ತನೆ ಆಗುವ ಸಾಧ್ಯತೆ ಇರುತ್ತದೆ.  ಆರೋಪಿಯನ್ನು ಬಂಧಿಸದೆ   ಪೊಲೀಸರು ಮೌನವಾಗಿದಲ್ಲಿ ನಮ್ಮ ಸಂಘಟನೆ  ಜೊತೆಗೆ ದಲಿತ ಪರ ಮುಖಂಡರ ಸಹಕಾರದೊಂದಿಗೆ  ಠಾಣೆಗೆ ಬಂದು ಕುಳಿತುಕೊಳ್ಳಬೇಕಾದ ಸ್ಥಿತಿ ಬರಬಹುದು.   ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮೇಲೆ ನಮಗೆ ಭರವಸೆ ಮತ್ತು ವಿಶ್ವಾಸವಿದೆ  , ಆರೋಪಿಯನ್ನು 24  ಗಂಟೆಯೊಳಗೆ ಬಂಧಿಸಬೇಕು    .ಎಂದು ದ.ಕ ಜಿಲ್ಲಾ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾಧ್ಯಕ್ಷ ವಿವೇಕನಂದ ಶಿರ್ತಾಡಿ   ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

 

Related Articles

Latest Articles