ನೆಲ್ಯಾಡಿ: ತಡರಾತ್ರಿ ವೇಳೆ ಮನೆಯಂಗಳದಲ್ಲೇ ಸಂಚರಿಸಿದ ಕಾಡಾನೆಗಳು

kadaba times

ನೆಲ್ಯಾಡಿ/ಕಡಬ: ಕಳೆದ ನಾಲ್ಕೈದು ದಿನಗಳಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪರಿಸರದಲ್ಲಿ ಜೋಡಿ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ವ್ಯಾಪಕ ಕೃಷಿ ಹಾನಿಗೊಳಿಸುತ್ತಿವೆ ರು

kadaba times
uniq

ಅ.16ರಂದು ರಾತ್ರಿ ಮಣ್ಣಗುಂಡಿಯ ಕೃಷಿಕರ   ತೋಟಕ್ಕೆ ನುಗ್ಗಿ ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶಗೊಳಿಸಿವೆ. ಅಲ್ಲದೇ ಕಾಡಾನೆ ದಾಳಿಗೆ ತೋಟದಲ್ಲಿದ್ದ ಸ್ಪಿಂಕ್ಲರ್ ಪೈಪುಲೈನ್‌ಗಳಿಗೂ ಹಾನಿಯಾಗಿದೆ. ಭತ್ತದ ಗದ್ದೆಗಳಿಗೂ ಕಾಡಾನೆ ದಾಳಿ ನಡೆಸಿರುವುದರಿಂದ ಭತ್ತದ ಕೃಷಿಯೂ ನಾಶಗೊಂಡಿದ್ದು ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗ್ರಾಮದ ನಿವಾಸಿಗಳ  ಹರಿಯಪ್ಪ ಗೌಡ, ಮಿಥುನ್, ವಿನೋದ್, ನೀಲಮ್ಮ, ಮೋಹನ ಅವರ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಹಾನಿಗೊಳಿಸಿದೆ ಎಂದು ತಿಳಿದು ಬಂದಿದೆ.

ಮನೆಯಂಗಳದಲ್ಲೇ ಸಂಚಾರ: ಕಾಡಾನೆಗಳು ತಡರಾತ್ರಿ ವೇಳೆ ಮನೆಯಂಗಳದಲ್ಲೇ ಸಂಚಾರ ಮಾಡುತ್ತಿರುವುದರಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲು ಜನ ಭಯಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಅ.16 ರ ತಡರಾತ್ರಿ ವೇಳೆ ಮಣ್ಣಗುಂಡಿ ನಿವಾಸಿ ಹರಿಯಪ್ಪ ಗೌಡ  ಎಂಬವರ ಮನೆಯ ಅಂಗಳದಲ್ಲೇ ಕಾಡಾನೆಗಳು ಸಂಚಾರ ನಡೆಸಿವೆ.  ಆನೆಗಳ ಹೆಜ್ಜೆ ಗುರುತು ಅಂಗಳದಲ್ಲಿ ಕಾಣಿಸಿಕೊಂಡಿದೆ.

kadaba times
kadaba times

ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಕೃಷಿ ತೋಟಗಳಿಗೆ ಕಾಡಾನೆಗಳು ನಿರಂತರ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿವೆ. ಕಾಡಾನೆಗಳ ಪದೇ ಪದೇ ದಾಳಿಯಿಂದ ಕೃಷಿಕರು ಕಂಗೆಟ್ಟಿದ್ದು ಕಾಡಾನೆಗಳು ಕೃಷಿ ತೋಟಕ್ಕೆ ಬರದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Related Articles

Latest Articles