
ಕಡಬ ಟೈಮ್ಸ್, ಪ್ರಮುಖ ಸುದ್ದಿ: ವಿಟ್ಲ-ಕನ್ಯಾನ ರಸ್ತೆಯೂ ತೀರಾ ಹದಗೆಟ್ಟು ಹೋಗಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಶವದ ಆಕೃತಿ ರಚಿಸಿ ರಸ್ತೆಯಲ್ಲಿ ಇಟ್ಟು ಆಕ್ರೋಶ ಹೊರಹಾಕಿರುವ ಘಟನೆ ನಡೆದಿದ್ದು ಪೋಟೊ ವೈರಲ್ ಆಗಿದೆ.


ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೈರಿಕಟ್ಟೆ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಬಿಡಿ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಒಂದು ಬದಿಗೆ ಇಂಟರ್ ಲಾಕ್ ಅಳವಡಿಸಿದ್ದು, ಅದೀಗ ಕಿತ್ತು ಹೋಗಿದೆ.
ಈ ರಸ್ತೆ ವಿಟ್ಲದಿಂದ ಕನ್ಯಾನ, ಬಾಯಾರು, ಉಪ್ಪಳ, ಆನೆಕಲ್ಲು, ಮಂಜೇಶ್ವರ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆ ಹದಗೆಟ್ಟ ಪರಿಣಾಮ ವಾಹನ ಸಂಚಾರ ದುಸ್ಥರವಾಗಿದೆ. ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್ ಗಳು, ಗುತ್ತಿಗೆದಾರರು ಮಲಗಿರುತ್ತಾರೆ. ಯಾರೂ ತೊಂದರೆ ಕೊಡಬಾರದು ಎಂದು ಬರೆಯಲಾಗಿದೆ.


ಈ ಮೂಲಕ ಜಿಲ್ಲಾಡಳಿತವನ್ನು ಆಕ್ರೋಶಿತರು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.
