ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಭಾವ ಚಿತ್ರ ವಿರೂಪಗೊಳಿಸಿ ವೀಡಿಯೋ ಪೋಸ್ಟ್

kadaba times

ಕಡಬ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಭಾವ ಚಿತ್ರವನ್ನು ವಿರೂಪಗೊಳಿಸಿ  ಕುರಿತು  ವೀಡಿಯೋ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಖಾತೆಯ  ವಿರುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ  ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

karma_karma_is_back ಎಂಬ ಇನ್‌ಸ್ಟಾಗ್ರಾಂ ಹೆಸರಿನ ಖಾತೆಯಲ್ಲಿ ಸಿಎಂ  ಭಾವ ಚಿತ್ರಕ್ಕೆ  ಚಪ್ಪಲಿ ಹಾರ ಹಾಕಿ ಮುಸ್ಲಿಂ  ದರ್ಮದ  ಟೋಪಿ ಧರಿಸಿದ ರೀತಿಯಲ್ಲಿನ  ಅಶ್ಲೀಲ  ಭಾವ ಚಿತ್ರ ರಚಿಸಿ  ಮುಖ್ಯ ಮಂತ್ರಿಯವರು ಕುಳಿತ ಚೆಯರ್ ಕೆಳಗೆ ಪಟಾಕಿ ಇರಿಸಿ ಬೆಂಕಿ ಹಚ್ಚಿ ಸಿಡಿಸುವಂತೆ ವೀಡಿಯೋ  ಪೋಸ್ಟ್‌ ಮಾಡಿರುವುದಾಗಿದೆ.

ಈ ಮೂಲಕ  ಪಕ್ಷದ  ನಾಯಕನಿಗೆ ಅವಮಾನ ಮಾಡಿರುವುದಲ್ಲದೆ,  ಹಿಂದುಗಳ ದಾರ್ಮಿಕ ಹಬ್ಬವಾದ ದೀಪಾವಳಿಯನ್ನು ಉಲ್ಲೇಖಿಸಿ  ವೀಡಿಯೋದಲ್ಲಿ  ಶುಬಾಶಯ ಕೋರುವುದರ ಮೂಲಕ  ಹಿಂದುಗಳ  ಭಾವನೆಗೆ ದಕ್ಕೆ  ಉಂಟು ಮಾಡಿರುತ್ತಾರೆ. ಮುಖ್ಯ ಮಂತ್ರಿಯವರ ಭಾವ ಚಿತ್ರಕ್ಕೆ ಮುಸ್ಲಿಂ ದರ್ಮದ ಟೋಪಿ ಧರಿಸಿ,  ಚಪ್ಪಲಿ ಹಾರ ಹಾಕಿದ ಭಾವ ಚಿತ್ರವನ್ನು ಪ್ರಕಟಿಸಿ ಧರ್ಮ ಧರ್ಮ ಗಳ ಮದ್ಯೆ ದ್ವೇಷ ಉಂಟಾಗುವ ರೀತಿಯಲ್ಲಿ  ಭಾವಚಿತ್ರವನ್ನು  ಸಾಮಾಜಿಕ ಜಾಲತಾಣದಲ್ಲಿ  ಪ್ರಕಟಿಸಲಾಗಿದೆ.

kadaba times
kadaba times

ಇದರಿಂದ  ಸಮಾಜದಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿಗೆ  ಭಂಗವುಂಟು ಮಾಡುವ ರೀತಿಯಲ್ಲಿ   ತನ್ನ ಖಾತೆಯ ಮೂಲಕ ಹಂಚಿಕೊಂಡ  karma_karma_is_back ಎಂಬ ಇನ್ಸ್ಟಗ್ರಾಂ ಎಂಬ ಅಕೌಂಟ್ ಹೊಂದಿದ  ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ   ಕೈಗೊಳುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಅಭಿಲಾಷ್  ನೀಡಿದ ದೂರಿನಂತೆ  ಠಾಣಾ ಅ.ಕ್ರ: 69/2025 ಕಲಂ: 352, 353(2) BNS-2023ರಂತೆ ಪ್ರಕರಣ ದಾಖಲಾಗಿದೆ.

ದೂರು ನೀಡಿದ ಕಾಂಗ್ರೆಸ್ ನಿಯೋಗದಲ್ಲಿ ಪಿ. ಪಿ. ವರ್ಗೀಸ್, ಕೃಷ್ಣಪ್ಪ ಪೂಜಾರಿ, ಅಭಿಲಾಷ್ ಪಿ. ಕೆ.
ತಮನ್ನಾ ಜಮೀನ್,ಪೈಝಲ್ , ಕೆಪಿಸಿಸಿ ಸಂಯೋಜಕ  ನ್ಯಾಯವಾದಿ ನೂರುದ್ದೀನ್ ಸಾಲ್ಮರ
,ಲೀಲಾವತಿ ಶಿವರಾಮ್, ಇಕ್ಬಾಲ್, ಹನೀಫ್ ಕಡಬ,ಕೆ. ಪಿ. ತೋಮಸ್, ಸತೀಶ ನಾಯ್ಕ್ ಕಡಬ, ತೋಮಸ್ ನೂಜಿಬಾಳ್ತಿಲ, ಡೆನಿಸ್, ಇಲ್ಯಾಸ್, ಶಾಕಿರ್ ಉಪಸ್ಥಿತರಿದ್ದರು.

Related Articles

Latest Articles