ಕಡಬ:ತನ್ನ ಮನೆಯ ರಬ್ಬರ್ ತೋಟದಲ್ಲಿ ನೇಣಿಗೆ ಶರಣಾದ ವ್ಯಕ್ತಿ

kadaba times

ಕಡಬ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೊಂದ ವ್ಯಕ್ತಿಯೊಬ್ಬರು ತನ್ನ ಮನೆಯ ರಬ್ಬರ್ ತೋಟದಲ್ಲಿ ನೇಣಿಗೆ ಶರಣಾದ ಘಟನೆ ಕೊಂಬಾರು ಗ್ರಾಮದಿಂದ  ವರದಿಯಾಗಿದೆ.

kadaba times
uniq

ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ  ಶೇಖರ ಗೌಡ ಆತ್ಮಹತ್ಯೆಗೆ ಶರಣಾದವರು.

ಪತ್ನಿ ಸುಮಾರು 4 ತಿಂಗಳ ಹಿಂದೆ ಮೈಗೆ  ಬೆಂಕಿ ತಾಗಿ  ಚಿಕಿತ್ಸೆ ಪಡೆದರೂ ಇನ್ನು ಸರಿಯಾಗಿ ಗುಣ ಮುಖರಾಗಿರುವುದಿಲ್ಲ. ಹೀಗಾಗಿ  ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಬೇಸರಗೊಂಡು ಹೆಚ್ಚಾಗಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.

kadaba times
kadaba times

ಅ.12  ರ ರಾತ್ರಿ  ಮೃತರ ಮಗ  ರಾತ್ರಿ ಊಟ ಮಾಡಿ ಮಲಗಿ ಸುಮಾರು  11-30 ಗಂಟೆ ಸಮಯಕ್ಕೆ ಹೊರಗೆ ಬಂದಾಗ  ತಂದೆ  ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಹುಡುಕಾಡಿದ್ದಾರೆ.  ಕೆಲ ಹೊತ್ತಿನ ಬಳಿಕ  ಮನೆಯ ಎದುರು ರಬ್ಬರ್  ತೋಟದಲ್ಲಿ ರಬ್ಬರ್ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಈ ಬಗ್ಗೆ  ಮೃತರ ಮಗ ಜಯಂತ   ಎಂಬವರು ನೀಡಿದ ದೂರಿನಂತೆ  ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ ನಂಬ್ರ 30/2025 ಕಲಂ:194 BNSS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles