
ಕಡಬ: ಇಲ್ಲಿನ ಕಡಬ ಮೆಡಿಕಲ್ ಸೆಂಟರ್ ಸಹಭಾಗಿತ್ವದಲ್ಲಿ ಜೇಸಿಐ ಕಡಬ ಕದಂಬ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಡಾ. ತ್ರಿಮೂರ್ತಿ ಇವರಿಗೆ ಸನ್ಮಾನ ಸಮಾರಂಭವು ಅ.5 (ಭಾನುವಾರ) ಕಡಬ ಮೆಡಿಕಲ್ ಸೆಂಟರ್ ನಲ್ಲಿ ನಡೆಯಲಿದೆ.


ಕುಟ್ರುಪ್ಪಾಡಿ ಗ್ರಾ.ಪಂ ಪಿಡಿಒ ಆನಂದ ಗೌಡ ಈ ಶಿಬಿರ ಉದ್ಘಾಟಿಸಲಿದ್ದು, ಜೇಸಿಐ ಕಡಬ ಕದಂಬದ ಅಧ್ಯಕ್ಷ ವಿಶ್ರುತ ರಾಜೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಂದನೀಯ ಫಾ| ಪಿ.ಕೆ ಅಬ್ರಹಾಂ ಕೋರ್ ಎಫಿಸ್ಕೋಪ, ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಳ್ಳಾಲ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಮನ್ನಾ ಜಬೀನ್, ಮಾಜಿ ಜಿ.ಪಂ ಸದಸ್ಯ ಕೃಷ್ಣ ಶೆಟ್ಟಿ ಕಡಬ,ರಬ್ಬರ್ ಸೊಸೈಟಿ ಉಪಾಧ್ಯಕ್ಷ ರೋಯ್ ಅಬ್ರಹಾಂ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಇದೇ ವೇಳೆ ಪ್ರಸ್ತುತ ಕಡಬ ಮೆಡಿಕಲ್ ಸೆಂಟರ್ ಕಳಾರ ಇಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ನಿವೃತ್ತ ಮುಖ್ಯ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಂದು ಕಡಬ ಮೆಡಿಕಲ್ ಸೆಂಟರ್ ಮುಖ್ಯಸ್ಥೆ ಲಿನ್ಸಿ ಸಂತೋಷ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
